ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಕಾಂಗ್ರೆಸ್ ವಿರುದ್ಧ ನಿಂತ ಮಿತ್ರಪಕ್ಷ' - EVMನತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದ ಒಮರ್ ಅಬ್ದುಲ್ಲಾ

ನವದೆಹಲಿ: ಇವಿಎಂ ಕುರಿತ ಕಾಂಗ್ರೆಸ್‌ ಪಕ್ಷದ ಆಕ್ಷೇಪಣೆಯನ್ನು ತಳ್ಳಿಹಾಕಿರುವ ಜಮ್ಮು ಮತ್ತು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಅವರು, ಚುನಾವಣಾ ಫಲಿತಾಂಶಗಳನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.

ಬಿಜೆಪಿ ಪರ ರಕ್ಷಣಾತ್ಮಕವಾಗಿ ದನಿ ಎತ್ತಿರುವ ಅವರು, ‘ಚುನಾವಣೆಗಳಲ್ಲಿ ಸೋಲುಂಟಾದಾಗ ಇ.ವಿ.ಎಂಗಳನ್ನು ದೂಷಿಸುವುದು ಸರಿಯಲ್ಲ, ಇ.ವಿ.ಎಂ ಬಳಕೆ ಆದಾಗಲೇ ಕಾಂಗ್ರೆಸ್‌ನವರು 100ಕ್ಕೂ ಹೆಚ್ಚು ಸ್ಥಾನ ಗೆದ್ದಿದ್ದು, ಪಕ್ಷದಲ್ಲಿ ಒಂದು ರೀತಿ ಸಂಭ್ರಮವನ್ನು ಆಚರಿಸಿದ್ದಾರೆ’ ಎಂದು ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು ಹೇಳಿದರು.

‘ಮತದಾನ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಬಾರದು. ಇವಿಎಂಗಳ ಬಗ್ಗೆ ಆಕ್ಷೇಪಗಳಿದ್ದರೆ ಅದಕ್ಕೆ ಬದ್ಧವಾಗಿರಬೇಕು. ವಿರೋಧಪಕ್ಷಗಳು ಮುಖ್ಯವಾಗಿ ಈಗ ಇವಿಎಂಗಳತ್ತಲೇ ಗಮನ ಕೇಂದ್ರೀಕರಿಸಿದೆ‘ ಎಂದು ಒಮರ್ ಅಬ್ದುಲ್ಲಾ ಅವರು ಹೇಳಿದರು.

‘ಭಾಗಶಃ ನಿಷ್ಠೆಗೂ ಮಿಗಿಲಾಗಿ ನಾನು ಸಿದ್ಧಾಂತಗಳನ್ನು ಆಧರಿಸಿ ಮಾತನಾಡುತ್ತೇನೆ. ಸ್ವತಂತ್ರ ಚಿಂತನೆಯಿಂದ ಈ ಹಿಂದೆ ಸೆಂಟ್ರಲ್‌ ವಿಸ್ತಾ ಸೇರಿದಂತೆ ಹಲವು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಪರವಾಗಿ ಮಾತನಾಡಿದ್ದೇನೆ’ ಎಂದು ಸಮರ್ಥಿಸಿಕೊಂಡರು.

Edited By : Abhishek Kamoji
PublicNext

PublicNext

15/12/2024 09:39 pm

Cinque Terre

12.42 K

Cinque Terre

0

ಸಂಬಂಧಿತ ಸುದ್ದಿ