ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

150 ಕೋಟಿ ಆಮಿಷ ಆರೋಪಕ್ಕೆ ಬಿಗ್ ಟ್ವಿಸ್ಟ್ : ಬಿಜೆಪಿಯಿಂದ ನನಗೆ ಯಾವುದೇ ಲಂಚದ ಆಮಿಷ ಬಂದಿಲ್ಲ ಅನ್ವರ್ ಮಾಣಿಪ್ಪಾಡಿ!

ಮಂಗಳೂರು : ವಕ್ಫ್‌ ವಿವಾದದ ಮೂಲಕ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಪಾಳಯದಲ್ಲಿ ಬೆಳವಣಿಗೆ ನಡೆದ ಬೆನ್ನಲ್ಲೇ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಮಂಗಳೂರಿನಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದು, ಈ ವಿಚಾರವಾಗಿ ಬಿಜೆಪಿ ಆಗಲಿ ಬಿವೈ ವಿಜಯೇಂದ್ರ ಯಾವುದೇ ಆಮೀಷ ಒಡ್ಡಿಲ್ಲ. ಬದಲಾಗಿ ಕಾಂಗ್ರೆಸ್ ನಾಯಕರೇ ನನಗೆ ಆಮಿಷ ಒಡ್ಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮಾಡಿರುವಂತಹ ಆರೋಪ ಶೇಕಡ 90% ಸುಳ್ಳು. ಬಿವೈ ವಿಜಯೇಂದ್ರ ನನ್ನ ಮನೆಗೆ ಯಾವತ್ತೂ ಬಂದಿಲ್ಲ. ನಾನು ವರದಿ ಸಲ್ಲಿಕೆ ಮಾಡುವಾಗ ಬಿವೈ ವಿಜಯೇಂದ್ರ ಇರಲೇ ಇಲ್ಲ. ನಾನು ಬಿಜೆಪಿಯವರ ಮೇಲೆ ಕಿಡಿ ಕಾರಿದ್ದಂತು ನಿಜ. ಸಿಬಿಐ ತನಿಖೆಗೆ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಕೊಡಲಿ. 1.60 ಲಕ್ಷ ಹೆಕ್ಟರ್ ಆಸ್ತಿ ವಕ್ಫ್ ಗೆ ಸೇರಿದ್ದು ಎಂದು ನೋಟಿಸ್ ನೀಡಿದ್ದಾರೆ.

ಆದರೆ ವಕ್ಫ್ ಬೋರ್ಡ್ ಆಸ್ತಿ ಇರುವುದು 54 ಸಾವಿರ ಹೆಕ್ಟರ್. 27 ರಿಂದ 28 ಸಾವಿರ ಹೆಕ್ಟೇರ್ ಜಮೀನು ಕಬಳಿಕೆ ಆಗಿದೆ. ಮೊದಲು ನೋಟಿಸ್ ಕೊಟ್ಟು ಏಕೆ ಹಿಂದಕ್ಕೆ ತೆಗೆದುಕೊಂಡರು? 2012-13 ರಲ್ಲಿ ಅನೇಕ ಜನರು ನನಗೆ ಆಮೀಷ ಒಡ್ಡಿದ್ದರು.ನನಗೆ ಆಮೀಷ ಒಡ್ಡಿದವರಲ್ಲಿ ಕಾಂಗ್ರೆಸ್ನವರೇ ಹೆಚ್ಚಾಗಿ ಇದ್ದರು ಎಂದು ತಿಳಿಸಿದ್ದಾರೆ.

ಬಿಜೆಪಿಯಿಂದ ನನಗೆ ಯಾವುದೇ ಲಂಚದ ಆಮಿಷ ಬಂದಿಲ್ಲ. ವರದಿ ಅನುಸಾರ ಸಿಬಿಐ ಗೆ ಕೊಟ್ಟರೆ ಕಾಂಗ್ರೆಸ್ ಈಗ ಬುಡಕ್ಕೆ ಬರುತ್ತದೆ ಹೀಗಾಗಿ ಈ ವಿಚಾರವಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಎಂದು ಹೇಳಿಕೆ ನೀಡಿದ್ದಾರೆ.

Edited By : Nirmala Aralikatti
PublicNext

PublicNext

15/12/2024 06:30 pm

Cinque Terre

9.61 K

Cinque Terre

1

ಸಂಬಂಧಿತ ಸುದ್ದಿ