ನವದೆಹಲಿ: ಸೊಳ್ಳೆಗಳ ಉತ್ಪತ್ತಿಗೆ ಕಾರಣರಾಗುವ ನಾಗರಿಕರಿಗೆ ಇನ್ಮುಂದೆ 5,000ರೂ ದಂಡ ವಿಧಿಸುವ ಬದಲಾಗಿ 50,000 ರೂ. ದಂಡ ವಿಧಿಸಬೇಕು ಎಂದು ದೆಹಲಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
ಸೊಳ್ಳೆ ಕಡಿತದಿಂದ ಉಲ್ಬಣವಾಗುವ ಡೆಂಗ್ಯೂ, ಮಲೇರಿಯಾ ಪ್ರಕರಣಗಳ ಸಂಖ್ಯೆ ದೆಹಲಿಯಾದ್ಯಂತ ಹೆಚ್ಚುತ್ತಲೇ ಇದೆ. ಈ ಹಿನ್ನಲೆ ಹೈಕೋರ್ಟ್ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಅದರ ವಿಚಾರಣೆ ನಡೆಸುತ್ತಿದೆ. ಇಂದು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಾಧೀಶ ವಿಪಿನ್ ಸಂಘಿ ದಂಡದ ಪ್ರಮಾಣ ಹೆಚ್ಚಿಸಲು ಸೂಚಿಸಿದರು.
PublicNext
27/05/2022 07:40 pm