ಮೈಸೂರು: ಸಮಾಜದ ಸಾಮರಸ್ಯ ಹಾಳು ಮಾಡಿ ಶಾಂತಿ ಕದಡುವ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಂವಿಧಾನದ ಕರ್ತವ್ಯವನ್ನು ಸೂಕ್ತ ರೀರತಿಯಲ್ಲಿ ಮಾಡಿಬೇಕೆಂದು ವಿಧಾಣ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಡಿದ ಅವರು, ಒಂದಲ್ಲ ಒಂದು ವಿಚಾರಕ್ಕೆ ರಾಜ್ಯ ಸರಕಾರ ಮೂಲೆಗುಂಪಾಗುತ್ತಿದೆ. ಪಿಎಸ್‌ಐ ಹಗರಣ ಮತ್ತು ಇತರ ವಿವಾದಗಳು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿವೆ. ಬೊಮ್ಮಾಯಿ ಇದಕ್ಕೆ ಕಡಿವಾಣ ಹಾಕಿ ಸರಕಾರಕ್ಕೆ ಹೊಸ ಛಾಪು ಮೂಡಿಸಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಪಕ್ಷವು ಹೊಸ ಮುಖಗಳಿಗೆ ಮತ್ತು ಯುವಕರಿಗೆ ಆದ್ಯತೆ ನೀಡಲಿದೆ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿಕೆಯನ್ನು ಉಲ್ಲೇಖಿಸಿದ ವಿಶ್ವನಾಥ್ ಅವರು, ಅವರ ಹೇಳಿಕೆಯನ್ನು ನಾನು ಒಪ್ಪುತ್ತೇನೆ. ವಂಶಾಡಳಿತ ರಾಜಕಾರಣವನ್ನು ಕೊನೆಗಾಣಿಸಲು ನಾನೂ ಬಯಸುತ್ತೇನೆಂದು ತಿಳಿಸಿದ್ದಾರೆ.
PublicNext
03/05/2022 12:42 pm