ಶಿವಮೊಗ್ಗ: ಸಚಿವ ಕೆ.ಎಸ್. ಈಶ್ವರಪ್ಪ ಇಂದು ಸಂಜೆ ರಾಜೀನಾಮೆ ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷ ಇವರ ರಾಜೀನಾಮೆಗೆ ಪಟ್ಟು ಹಿಡಿದ ಬೆನ್ನಲ್ಲೇ ಈಶ್ವರಪ್ಪ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಇನ್ನು ರಾಜೀನಾಮೆ ನೀಡಲು ಹೊರಟ ಈಶ್ವರಪ್ಪನವರಿಗೆ ಮಹಿಳಾ ಮೋರ್ಚಾ ಸದಸ್ಯರು ಕಣ್ಣೀರಿಟ್ಟು ರಾಜೀನಾಮೆ ನೀಡಬೇಡಿ ಎಂದು ಪಟ್ಟು ಹಿಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಈ ವೇಳೆ ಮಹಿಳಾ ಸದಸ್ಯೆಯರಿಗೆ ಸಾಂತ್ವನ ಹೇಳಿದ ಈಶ್ವರಪ್ಪ ನಾನು ಆಪಾದನೆಯಿಂದ ಹೊರಬರಬೇಕೆಂದರೆ, ರಾಜೀನಾಮೆ ನೀಡಬೇಕು.
ಎಲ್ಲಾ ಆರೋಪಗಳಿಂದ ಮುಕ್ತನಾಗಿ ನಾನು ಮತ್ತೆ ಮಂತ್ರಿಯಾಗಿ ವಾಪಾಸ್ ಬಂದೇ ಬರ್ತಿನಿ. ಯಾರು ಕೂಡ ಅಳಬೇಡಿ ಎಂದು ಕಣ್ಣೀರು ಹಾಕುತ್ತಾ ಬಂದ ಮಹಿಳೆಯರಿಗೆ ಸಾಂತ್ವನ ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಯಾರು ಹೆದರೋದು ಬೇಡ.ನಾನು ಸಚಿವ ಸ್ಥಾನದಲ್ಲಿದ್ದರೆ, ಪ್ರಭಾವ ಬೀರುತ್ತಾರೆಂಬ ಆರೋಪ ಮಾಡ್ತಾರೆ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಅಷ್ಟೇ ಚಿಂತೆ ಮಾಡಬೇಡಿ ವಾಪಸ್ ಬಂದೆ ಬರುತ್ತೇನೆ ಎಂದಿದ್ದಾರೆ.
PublicNext
15/04/2022 04:15 pm