ತುಮಕೂರು: ಮಠವನ್ನು ಗೌರವಿಸುವುದು ಅಂದ್ರೆ ಶೂ ಹಾಕಿಕೊಳ್ಳುವುದಲ್ಲ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾಲೆಳೆದಿದ್ದಾರೆ.
ಶಿವಕುಮಾರ ಶ್ರೀಗಳ 115ನೇ ಜನ್ಮದಿನ ಉತ್ಸವ ಸಿದ್ದಗಂಗಾ ಮಠದಲ್ಲಿ ನಡೆಯಿತು. ಹೀಗಾಗಿ ನಿನ್ನೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರೀಗಳ ಜನ್ಮದಿನ ಉತ್ಸವದಲ್ಲಿ ಭಾಗಿಯಾಗಿದ್ದರು. ಇಬ್ಬರು ಗಣ್ಯರು ವೇದಿಕೆ ಮೇಲೆ ಕೂರುವಾಗ ಕಾಲು ಮೇಲೆ ಕಾಲು ಹಾಕಿಕೊಂಡು ಕೂರುತ್ತಾರೆ. ರಾಹುಲ್ ಗಾಂಧಿಯವರು ಬೂಟು ತೆಗೆದು ಮತ್ತು ಅಮಿತ್ ಶಾ ಬೂಟುಗಳು ಹಾಕಿಕೊಂಡೇ ವೇದಿಕೆ ಮೇಲೆ ಕೂತಿದ್ದರು. ಈಗ ಇದೇ ವಿಚಾರವಾಗಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
ಅಮಿತ್ ಶಾ ಅವರೇ ಯಾರೇ ಆಗಲಿ ಮಠ ಮತ್ತು ಸಂಸ್ಕೃತಿಯನ್ನು ಗೌರವಿಸುವುದು ಅಂದ್ರೆ ಬೂಟು ತೆಗೆಯುವುದು ಹೊರತು ಹಾಕಿಕೊಂಡು ಸ್ವಾಮೀಜಿ ಕಡೆ ಕಾಲು ತೋರಿಸುವುದಲ್ಲ. ನೀವು ಯಾವ ಹುದ್ದೆಯಲ್ಲಿದ್ದೀರಿ ಎಂಬುದು ಇಲ್ಲಿ ಅಪ್ರಸ್ತುತ. ಬಸವಣ್ಣನವರ ಮನೆಯಲ್ಲಿ ಎಲ್ಲರೂ ಸಮಾನರು. ಸಿದ್ದಗಂಗಾ ಮಠದಲ್ಲಿ ಕೇಂದ್ರ ಗೃಹ ಸಚಿವರ ಕ್ರಮ ಸ್ವೀಕಾರಾರ್ಹವಲ್ಲ. ನಕಲಿ ಮತ್ತು ನಿಜವಾದ ನಂಬಿಕೆಯುಳ್ಳವರ ನಡುವಿನ ವ್ಯತ್ಯಾಸವನ್ನು ನೋಡಿ ಎಂದು ರಾಹುಲ್ ಗಾಂಧಿ ಮತ್ತು ಅಮಿತ್ ಶಾ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
PublicNext
01/04/2022 09:01 pm