ಬೆಂಗಳೂರು: ಸಿದ್ದರಾಮಯ್ಯ, ರಾಹುಲ್ ಗಾಂಧಿ, ರಮ್ಯಾ, ಪ್ರಿಯಾಂಕಾ, ಮಲಾಲಾ, ಕಮಲ್ ಹಾಸನ್, ಅಲ್ ಜಜೀರಾ ಇದೆಲ್ಲವೂ ಭಾರತ ವಿರೋಧಿ ಟೂಲ್ ಕಿಟ್ ಗ್ಯಾಂಗ್ ಎಂದು ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
ಟ್ವೀಟ್‍ನಲ್ಲಿ ಏನಿದೆ?:
ಹಿಜಾಬ್ ವಿವಾದದ ಹಿಂದಿರುವ ಧ್ವನಿಗಳು- ಸಿದ್ದರಾಮಯ್ಯ, ರಾಹುಲ್ ಗಾಂಧಿ, ರಮ್ಯಾ, ಪ್ರಿಯಾಂಕಾ, ಮಲಾಲಾ, ಕಮಲ್ ಹಾಸನ್, ಅಲ್ ಜಜೀರಾ! ಇದೆಲ್ಲವೂ ಭಾರತ ವಿರೋಧಿ ಟೂಲ್ ಕಿಟ್ ಗ್ಯಾಂಗ್. ಒಡೆದು ಅಳುವ ನೀತಿ ಕಾಂಗ್ರೇಸ್ ಪಕ್ಷದ ಹುಟ್ಟು ಗುಣ. ಯುವ ಜನಾಂಗ ಈ ರೀತಿ ಇಬ್ಭಾಗವಾಗಲು ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕೊತ್ವಾಲ್ ಶಿಷ್ಯ ಈಗ ಹಿಟ್ & ರನ್ ರಾಜಕೀಯ ಪ್ರಾರಂಭಿಸಿದ್ದಾರೆ. ಬಿಜೆಪಿಯವರು ಸೂರತ್‍ನಿಂದ ಪೇಟಗಳನ್ನು ತರಿಸಿದ್ದಾರೆ ಎಂದು ಇನ್ನೊಂದು ಸುಳ್ಳು ಆರೋಪ ಮಾಡಿದ್ದಾರೆ. ಡಿಕೆಶಿಯವರೇ, ಹಿಜಬ್ ವಿವಾದ ಮುಗಿಯುವವರೆಗೆ ಇನ್ನೆಷ್ಟು ಸುಳ್ಳು ಹೇಳುತ್ತೀರಿ? ಇದುವರೆಗೆ ಇಲ್ಲದ ಹಜಬ್ ವಿವಾದವನ್ನು ಸೃಷ್ಟಿಸಲು ವಿದ್ಯಾರ್ಥಿನಿಯರಿಗೆ ಹಿಜಬ್ ಪೂರೈಕೆ ಮಾಡಿದ್ದು ಕೆಪಿಸಿಸಿ ಕಚೇರಿಯಿಂದಲೇ?.
PublicNext
09/02/2022 11:00 pm