ಬೆಂಗಳೂರು: ಪ್ರಧಾನಿ ಮೋದಿ ಪಂಜಾಬ್ ಭೇಟಿ ವೇಳೆ ಭದ್ರತಾ ಲೋಪವಾಗಿದ್ದರ ಬಗ್ಗೆ ಲೇವಡಿಯ ಮಾತುಗಳನ್ನಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ರಾಜ್ಯ ಬಿಜೆಪಿ ತೀವ್ರ ಅಸಮಧಾನ ಹೊರಹಾಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, 'ಮಲ್ಲಿಕಾರ್ಜುನ ಖರ್ಗೆ ಅವರೇ ರಾಜಕೀಯ ಮಾಡುವುದಕ್ಕೆ ಬೇರೆ ಅಖಾಡ ನಿರ್ಮಿಸೋಣ. ಭದ್ರತಾ ಲೋಪದ ವಿಚಾರದಲ್ಲೂ ರಾಜಕಾರಣ ಮಾಡುವಷ್ಟು ನಕಲಿ ಗಾಂಧಿ ಕುಟುಂಬದ ಗುಲಾಮಗಿರಿಗೆ ಇಳಿಯಬೇಡಿ. ಇಂದಿರಾ, ನೆಹರೂ, ರಾಜೀವ್ ಅವರಿಗಿಂತ ಹತ್ತುಪಟ್ಟು ಹೆಚ್ಚು ಭದ್ರತೆ ಮೋದಿಗೆ ಇದೆ ಎಂಬ ನಿಮ್ಮ ಹೇಳಿಕೆಯಲ್ಲೇ ಅಸೂಯೆ ಮೊಳಗುತ್ತಿದೆ' ಎಂದು ಟ್ವೀಟ್ ಮಾಡಿರುವ ಬಿಜೆಪಿ, ಮಲ್ಲಿಕಾರ್ಜುನ್ ಖರ್ಗೆ ಮೇಲೆ ಆಕ್ರೋಶಗೊಂಡಿದೆ.
ಭದ್ರತಾ ಲೋಪವಾದ ನಂತರ ಪ್ರತಿಕ್ರಿಯೆ ನೀಡಿದ್ದ ಮಲ್ಲಿಕಾರ್ಜುನ್ ಖರ್ಗೆ, ಈ ಕುರಿತು ಪ್ರಧಾನಿ ಕಚೇರಿಯವರು ಹಾಗೂ ಬಿಜೆಪಿ ವಕ್ತಾರರು ದೇಶದ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸರಳ, ಸಜ್ಜನ ವ್ಯಕ್ತಿಯಾಗಿರವ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಈ ಮೂಲಕ ಪ್ರಯತ್ನಿಸುತ್ತಿದ್ದಾರೆ ಎಂದಿದ್ದರು.
PublicNext
06/01/2022 07:43 pm