ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿಯಲ್ಲಿ ಮುಗ್ಗರಿಸಿದ ಬಿಜೆಪಿ : ಗೆದ್ದು ಬೀಗಿದ ಪಕ್ಷೇತರ ಅಭ್ಯರ್ಥಿ ಲಖನ್

ಬೆಳಗಾವಿ : 13 ಜನ ಬಿಜೆಪಿ ಶಾಸಕರು, 2 ಬಿಜೆಪಿ ಸಂಸದರು, 1 ಬಿಜೆಪಿ ರಾಜ್ಯಸಭಾ ಸದಸ್ಯ ಇದ್ದರೂ ಕುಂದಾನಗರೀ ಬೆಳಗಾವಿಯಲ್ಲಿ ಬಿಜೆಪಿ ಮಕಾಡೆ ಮಲಗಿದೆ. ಹೌದು ಎರಡು ಪರಿಷತ್ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಇದು ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಗೆ ಮುಜುಗರ ತಂದಿದೆ.

ಇನ್ನು ಕಾಂಗ್ರೆಸ್ ಸೋಲಿಸಲು ಪಣತೊಟ್ಟ ಜಾರಕಿಹೊಳಿ ಬ್ರದರ್ಸ್ ರಣತಂತ್ರ ಬಿಜೆಪಿಗೆ ಮುಳುವಾಗಿದೆ. ಮಾತ್ರವಲ್ಲದೆ ಸಿಎಂ ಬಸವರಾಜ ಬೊಮ್ಮಾಯಿ ರಣತಂತ್ರವೂ ಸಂಪೂರ್ಣ ವಿಫಲವಾಗಿದ್ದು,ಪರಿಷತ್ ಫೈಟ್ ನಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆದ್ದು ಬೀಗಿದ್ದಾರೆ.

ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ರಣತಂತ್ರದಿಂದ ಸಹೋದರ ಲಖನ್ ಗೆ ಗೆಲುವಾಗಿದೆ. 2ನೇ ಪ್ರಾಶಸ್ತ್ಯದ ಮತಗಳಲ್ಲೂ ಲಖನ್ ಗೆ ಹೆಚ್ಚು ಮತ ದೊರೆತಿದ್ದು BJP ಅಭ್ಯರ್ಥಿ ಮಹಾಂತೇಶ್ ಕವಟಗಿಮಠಗೆ ಸೋಲಾಗಿದೆ. 2 ಬಾರಿ MLCಯಾಗಿ ಆಯ್ಕೆಯಾಗಿದ್ದ ಕವಟಗಿಮಠಗೆ ಈ ಸೋಲು ತೀವ್ರ ಮುಖಭಂಗ ತಂದಿದೆ.

Edited By : Nirmala Aralikatti
PublicNext

PublicNext

14/12/2021 04:44 pm

Cinque Terre

70.77 K

Cinque Terre

10

ಸಂಬಂಧಿತ ಸುದ್ದಿ