ವಿಜಯಪುರ: ಬಿಜೆಪಿಯಲ್ಲಿ ಅಧಿಕಾರ ದಾಹ ಹೆಚ್ಚಿದೆ. ಅವರಿಗೆ ರಾಜಕೀಯ ಮಾಡೋಕೆ ಬರೋದಿಲ್ಲ. ಅದರಲ್ಲೂ ಬಸವರಾಜ್ ಬೊಮ್ಮಾಯಿ ಅವರ ಮೇಲೆ ಅವರ ಪಕ್ಷದವರಲ್ಲಿಯ ವಿಶ್ವಾಸ ಇಲ್ಲ. ಹಾಗಿದ್ದಾಗ ಅವರು ಅಧಿಕಾರದಲ್ಲಿ ಇರಲೇಬಾರದು. ಬಿಎಸ್ ಯಡಿಯೂರಪ್ಪ ನೋಡಿ, ಅವರ ಮೇಲೆ ವಿಶ್ವಾಸ ಇಲ್ಲ ಅಂದ ಕೂಡಲೇ ರಾಜೀನಾಮೆ ಕೊಟ್ಟರು. ಬಸವರಾಜ್ ಬೊಮ್ಮಾಯಿ ಇನ್ನೂ ಯಾಕಿದ್ದಾರೋ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿಕುಮಾರ್ ಟೀಕಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್,ಬಿಜಿಪಿ ಪಕ್ಷದ ನಡೆಗಳನ್ನ ಟೀಕಿಸಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರ ಆಡಳಿತ ಸರಿ ಇಲ್ಲ ಅಂತಲೇ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ನಾಯಕರು ಹೇಳಿದ್ದಾರೆ. ಆದರೂ ಬಸವರಾಜ್ ಬೊಮ್ಮಾಯಿ ಇನ್ನೂ ಅಧಿಕಾರದಲ್ಲಿಯೇ ಇದ್ದಾರೆ.
ನಿರಾಣಿ ಮುಂದಿನ ಸಿಎಂ ಎಂದು ಈಶ್ವರಪ್ಪ ಹೇಳಿದ್ದ ಹೇಳಿಕೆಗೂ ಪ್ರತಿಕ್ರಿಯೆ ಕೊಟ್ಟ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಆಡಳಿತ ಕುಸಿಯುತ್ತಿದೆ.ಆದರೆ ಇದರ ಬಗ್ಗೆ ನಾವೇನೂ ಮಾತನಾಡಿಲ್ಲ. ಈಶ್ವರಪ್ಪನವರೇ ಭ್ರಷ್ಟಾಚಾರದ ಬಗ್ಗೆ ಮಾತನಾಡಿರೋದು. ಇನ್‌ಕಮ್ ಟ್ಯಾಕ್ಸ್ ರೇಡಿಗೆ ಹೋದಾಗ ಅವರಿಗೆ ಕೆಲವು ಮಾಹಿತಿ ಸಿಕ್ಕಿದೆ. ಅದನ್ನ ಇಟ್ಟುಕೊಂಡು ಅವರು ಚರ್ಚೆ ಮಾಡುತ್ತಿದ್ದಾರೆ ಅಂತಲೂ ಡಿಕೆಶಿ ಹೇಳಿದ್ದಾರೆ.
PublicNext
29/11/2021 07:40 pm