ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಸರ್ವಾಧಿಕಾರಿ ಆಗಿದ್ದರೇ ಕಾಯ್ದೆ ಹಿಂಪಡೆಯುತ್ತಿರಲಿಲ್ಲ: ಶಾಸಕ ಸಿ.ಟಿ ರವಿ

ಚಿಕ್ಕಮಗಳೂರು:ಕಾಂಗ್ರೆಸ್ ಸೇರಿ ಇತರ ರಾಜಕೀಯ ಪಕ್ಷಗಳೇ ಕೃಷಿ ಕಾಯ್ದೆ ತರಬೇಕು ಅಂತಲೇ ಹೇಳುತ್ತಿದ್ದರು. ರೈತರ ಮಾರುಕಟ್ಟೆ ಮುಕ್ತಗೊಳ್ಳಬೇಕು ಎನ್ನುತ್ತಿದ್ದರು. ಆದರೆ ರಾಜಕೀಯ ಕಾರಣಕ್ಕೆ ವಿರೋಧಿಸಿದರು.ಒಂದು ದಿನ ಬಂದೇ ಬರುತ್ತದೆ. ಕೃಷಿ ಕಾಯ್ದೆ ವಿರೋಧಿಸಿದ ಜನರೇ ಈ ಕಾಯ್ದೆ ಬಗ್ಗೆ ಮಾತನಾಡುತ್ತಾರೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಮೋದಿ ಸರ್ವಾಧಿಕಾರಿ ಆಗಿದ್ದರೇ ನಿಜಕ್ಕೂ ಕೃಷಿ ಕಾಯ್ದೆಯನ್ನ ಹಿಂಪಡೆಯುತ್ತಲೇ ಇರಲಿಲ್ಲ. ಅವರು ಪ್ರಜಾಪ್ರಭುತ್ವವಾದಿಗಳೇ ಆಗಿದ್ದಾರೆ.ಅದಕ್ಕೇನೆ ಕಾಯ್ದೆ ಹಿಂಪಡೆದಿದ್ದಾರೆ. ಹಾಗಂತ ಪ್ರಜಾಪ್ರಭುತ್ವದಲ್ಲಿ ಒಂದು ಹೆಜ್ಜೆ ಹಿಂದಿಡೋದನ್ನ ನಾವು ಅಪಮಾನ ಅಂತ ತಿಳಿದುಕೊಳ್ಳೋದಿಲ್ಲ ಎಂದಿದ್ದಾರೆ ಸಿ.ಟಿ.ರವಿ.

ಜಾರಿ ಆಗಿದ್ದ ಕೃಷಿ ಕಾಯ್ದೆಯನ್ನ ಆತಂಕವಾದಿಗಳು ತಪ್ಪಾಗಿಯೆ ಬಿಂಬಿಸಿದ್ದಾರೆ.ಹಾಗಾಗಿಯೇ ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಕಾಯ್ದೆ ಬಗ್ಗೆ ಇಲ್ಲಿ ಸರಿಯಾಗಿ ಮನವರಿಕೆ ಮಾಡಲು ಆಗಲೇ ಇಲ್ಲ. ಈ ಹಿಂದೆ ರೈತ ಸಂಘಟನೆಗಳೇ ಮಾರುಕಟ್ಟೆ ಮುಕ್ತ ಆಗಬೇಕು ಅಂತ ಹೋರಾಟ ಮಾಡಿ ಭಾಷಣ ಮಾಡಿದರು. ರೈತರ ಮಾರುಕಟ್ಟೆ ಮುಕ್ತಗೊಳಿಸಿದ್ದ ಮೋದಿ ವಿರುದ್ಧವೇ ರೈತರ ಸಂಘಟನೆಗಳು ಪ್ರತಿಭಟನೆ ಮಾಡಿದರ ಅಂತಲೇ ಹೇಳಿದ್ದಾರೆ ಸಿ.ಟಿ.ರವಿ.

Edited By : Nagesh Gaonkar
PublicNext

PublicNext

19/11/2021 05:41 pm

Cinque Terre

66.27 K

Cinque Terre

9

ಸಂಬಂಧಿತ ಸುದ್ದಿ