ಬೆಂಗಳೂರು: ಅತ್ತ ನೂತನ ಸಚಿವರು ಪ್ರಮಾಣ ವಚನ ಸಂಭ್ರಮದಲ್ಲಿದ್ದರೆ, ಇತ್ತ ಮಾಜಿ ಸಿಎಂ ಯಡಿಯೂರಪ್ಪ ಅವರ ಬೆರಳಿಗೆ ಮಹಿಳೆಯೊಬ್ಬರ ಸೀರೆ ಪಿನ್ ಚುಚ್ಚಿ ನೋವು ಪಡುವಂತಾಯಿತು.
ಹೌದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ 29 ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದ ಬಿಎಸ್‌ವೈ ಅವರ ಆರ್ಶೀವಾದ ಪಡೆಯಲು ಗೋಪಾಲಯ್ಯ ಅವರ ಕುಟುಂಬ ಸದಸ್ಯರು ಸೇರಿದಂತೆ ಅನೇಕರು ಮುಂದಾದರು. ಈ ವೇಳೆ ಮಹಿಳೆಯ ಸೀರೆಯಲ್ಲಿದ್ದ ಪಿನ್ ಬಿಎಸ್‌ವೈ ಕೈಗೆ ಚುಚ್ಚಿ ಕೊಂಡಿತ್ತು. ಕೂಡಲೇ ಕೈ ಹಿಂದಕ್ಕೆ ಎಳೆದುಕೊಂಡ ಬಿಎಸ್‌ವೈ ನಗುತ್ತಲೇ ಅವರೊಂದಿಗೆ ಮಾತುಕತೆ ಮುಂದುವರಿಸಿದರು.
PublicNext
04/08/2021 04:08 pm