ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಗಿ ಸರ್ಕಾರದಿಂದ 'ಶ್ರೀರಾಮ' ವಿಮಾನ ನಿಲ್ದಾಣಕ್ಕೆ 101 ಕೋಟಿ ರೂ.

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ 'ಶ್ರೀರಾಮ' ವಿಮಾನ ನಿಲ್ದಾಣಕ್ಕೆ 101 ಕೋಟಿ ರೂ. ಅನುದಾನ ನೀಡಿದ್ದಾರೆ.

ಹೌದು. ಉತ್ತರ ಪ್ರದೇಶದ ಸರ್ಕಾರವು ಇಂದು ಇದೇ ಮೊದಲ ಬಾರಿಗೆ ಪೇಪರ್​ ರಹಿತ ಬಜೆಟ್ ಮಂಡನೆ ಮಾಡಿದೆ. ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಅವರು 27,598.40 ಕೋಟಿ ರೂ. ಬಜೆಟ್​ ಮಂಡಿಸಿದ್ದಾರೆ. ಈ ಪೈಕಿ ಮರ್ಯಾದಾ ಪುರುಷ ಶ್ರೀರಾಮ ವಿಮಾನ ನಿಲ್ದಾಣ ಸೇರಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಮೀಸಲಿಡಲಾಗಿದೆ.

ಅಯೋಧ್ಯೆಯಲ್ಲಿ ಶ್ರೀರಾಮ ವಿಮಾನ ನಿಲ್ದಾಣ ತಲೆ ಎತ್ತಲಿದ್ದು, ಅದಕ್ಕಾಗಿ 101 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಉಳಿದಂತೆ ಜುವರ್, ಚಿತ್ರಕೂತ್ ಮತ್ತು ಸೋನ್‌ಭದ್ರನಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣಕ್ಕಾಗಿ ಒಟ್ಟು 2,000 ಕೋಟಿ ರೂ. ಕೊಡಲಾಗಿದೆ. ಮಹಿಳಾ ಕಲ್ಯಾಣಕ್ಕಾಗಿ ಮುಖ್ಯಮಂತ್ರಿಗಳ ಯೋಜನೆಯಲ್ಲಿ ಬಾಲಕಿಯರಿಗೆ ಮಾತ್ರೆ ನೀಡಲು 1,200 ಕೋಟಿ ರೂ., ಪೂರ್ವಾಂಚಲ್ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ 1107 ಕೋಟಿ ರೂ., ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ವೇಗೆ 1492 ಕೋಟಿ ರೂ., ಗೋರಖ್‌ಪುರ ಎಕ್ಸ್‌ಪ್ರೆಸ್ ವೇಗೆ 750 ಕೋಟಿ ರೂ. ಮೀಸಲಿಡಲಾಗಿದೆ.

Edited By : Vijay Kumar
PublicNext

PublicNext

22/02/2021 05:27 pm

Cinque Terre

53.62 K

Cinque Terre

3

ಸಂಬಂಧಿತ ಸುದ್ದಿ