ಲಕ್ನೋ: ಸುಭಾಷ್ ಚಂದ್ರ ಬೋಸ್ ಅವರನ್ನು ಕಾಂಗ್ರೆಸ್ ಕೊಂದಿದೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಬಹಿರಂಗವಾಗಿ ಆರೋಪಿಸಿದ್ದಾರೆ.
ಉನ್ನಾವೊದ ಔರಾಸ್ ಬ್ಲಾಕ್ ಪ್ರದೇಶದ ಉತ್ರಾ ದಕಾಲಿ ಗ್ರಾಮದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೇತಾಜಿ ಜೀವಂತವಾಗಿದ್ದರೆ ಅವರು ಮೊದಲು ಪ್ರಧಾನಿಯಾಗುತ್ತಿದ್ದರು. ನೇತಾಜಿ ಅವರಿಗಿದ್ದ ಜನಪ್ರಿಯತೆ ಪಂಡಿತ್ ಜವಾಹರಲಾಲ್ ನೆಹರೂ ಹಾಗೂ ಮಹಾತ್ಮ ಗಾಂಧಿ ಅವರಿಗೆ ಇರಲಿಲ್ಲ. ಆದ್ದರಿಂದ ನೇತಾಜಿ ಅವರನ್ನು ಕೊಲ್ಲಲಾಯಿತು ಎಂದು ದೂರಿದ್ದಾರೆ.
ಸಾಕ್ಷಿ ಮಹಾರಾಜ್ ಈ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
PublicNext
24/01/2021 10:37 am