ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಜೋ ಬೈಡನ್ ಮಹತ್ವದ 15 ಕಾರ್ಯಾದೇಶಗಳಿಗೆ ಸಹಿ ಹಾಕಿದ್ದಾರೆ.ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಗಳಿಗೆ ಸಂಬಂಧಿಸಿದಂತೆ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೈಗೊಂಡಿದ್ದ ಹಲವು ನಿರ್ಧಾರಗಳನ್ನು ಬೈಡನ್ ಬದಲಾಯಿಸಿದ್ದಾರೆ.
ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದಿದ್ದ ನಿರ್ಧಾರವನ್ನು ಬದಲಿಸಲಾಗಿದೆ. ಈಗ ಅದರ ಮರು ಸೇರ್ಪಡೆಗೆ ಸಹಿ ಹಾಕಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಗೆ ಮರು ಸೇರ್ಪಡೆಯ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ, ಮುಸ್ಲಿಮರ ಸಂಚಾರಕ್ಕೆ ವಿಧಿಸಲಾಗಿದ್ದ ನಿಷೇಧ ರದ್ದುಪಡಿಸಲಾಗಿದೆ ಹಾಗೂ ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಾಣವನ್ನು ಸ್ಥಗಿತಗೊಳಿಸುವ ಆದೇಶಕ್ಕೆ ಸಹಿ ಹಾಕಲಾಗಿದೆ. ಇನ್ನೂ ಕನಿಷ್ಠ 100 ದಿನಗಳ ಕಾಲ ಕಡ್ಡಾಯವಾಗಿ ಅಮೆರಿಕನ್ನರು ಮಾಸ್ಕ್ ಧರಿಸಬೇಕು ಎನ್ನುವ ಕಾರ್ಯಾದೇಶಕ್ಕೆ ಜೋ ಬೈಡೆನ್ ಸಹಿ ಹಾಕಿದ್ದಾರೆ.
PublicNext
21/01/2021 11:58 am