ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೀವ್ರ ಚರ್ಚೆಗೆ ಗ್ರಾಸವಾದ ಫಡ್ನವೀಸ್-ರಾವತ್ ಭೇಟಿ

ಮುಂಬೈ: ಮಹಾರಾಷ್ಟ್ರದಲ್ಲಿ ಸದಾ ಬಿಜೆಪಿಯನ್ನು ಬೆಂಬಲಿಸುತ್ತಿದ್ದ ಶಿವಸೇನೆ ಇದೇ ಮೊದಲ ಬಾರಿಗೆ ಬಿಜೆಪಿಯ ಸಂಘ ತೊರೆದಿದೆ. ಮಿತ್ರ ಪಕ್ಷಗಳಂತಿದ್ದ ಎರಡೂ ಪಕ್ಷಗಳು ಇದೀಗ ಹಾವು-ಮುಂಗುಸಿಯಂತಾಗಿವೆ.

ಶಿವಸೇನೆಯವರು ಬಿಜೆಪಿ ಮೇಲೆ ಬಿಜೆಪಿಯವರು ಶಿವಸೇನೆ ಮೇಲೆ ಆರೋಪ ಪ್ರತ್ಯಾರೋಪ ಮಾಡುತ್ತಲೇ ಇದ್ದಾರೆ. ಇದರ ಮಧ್ಯೆ ಮಹಾರಾಷ್ಟ್ರದ ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರು, ಶಿವಸೇನೆ ನಾಯಕ ಸಂಜಯ್​ ರಾವತ್ ಅವರನ್ನು ಭೇಟಿಯಾಗಿ, ಗುಟ್ಟಾಗಿ ಮೀಟಿಂಗ್​ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಫಡ್ನವೀಸ್​ ಮತ್ತು ರಾವತ್​ ಮುಂಬೈನ ಹೊರವಲಯದಲ್ಲಿರುವ ಹೋಟೆಲ್​​ನಲ್ಲಿ ಭೇಟಿಯಾದ ವಿಚಾರ ಹೊರಬೀಳುತ್ತಿದ್ದಂತೆ ಅನೇಕ ಊಹಾಪೋಹಗಳು ಎದ್ದಿವೆ. ಇವರಿಬ್ಬರ ಭೇಟಿ ಬಗ್ಗೆ ಮಾತುಕತೆಗಳು ಹೆಚ್ಚಾಗುತ್ತಿದ್ದಂತೆ ಮಹಾರಾಷ್ಟ್ರದ ಬಿಜೆಪಿಯ ಮುಖ್ಯ ವಕ್ತಾರ ಕೇಶವ್​ ಉಪಾಧ್ಯೆ ಸ್ಪಷ್ಟನೆ ನೀಡಿದ್ದಾರೆ.

ದೇವೇಂದ್ರ ಫಡ್ನವೀಸ್​ ಹಾಗೂ ಸಂಜಯ್​ ರಾವತ್​ ಅವರ ಭೇಟಿ ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಅಲ್ಲ. ಶಿವಸೇನೆ ಮುಖವಾಣಿ ಸಾಮ್ನಾಕ್ಕಾಗಿ ಫಡ್ನವೀಸ್​ ಅವರನ್ನು ಸಂದರ್ಶನ ಮಾಡಲು ಸಂಜಯ್​ ರಾವತ್​ ಇಚ್ಛಿಸಿದ್ದಾರೆ. ಈ ಬಗ್ಗೆ ಚರ್ಚೆ ಮಾಡುವುದಕ್ಕೋಸ್ಕರವಷ್ಟೇ ಪೂರ್ವಭಾವಿಯಾಗಿ ಇವರಿಬ್ಬರೂ ಭೇಟಿಯಾಗಿದ್ದರು ಎಂದು ತಿಳಿಸಿದ್ದಾರೆ.

ಬಿಹಾರ ಚುನಾವಣೆ ಮುಗಿದ ಬಳಿಕ ಸಂದರ್ಶನ ಕೊಡುವುದಾಗಿ ಫಡ್ನವೀಸ್​ ಹೇಳಿದ್ದಾಗಿ ಉಪಾಧ್ಯೆ ಮಾಹಿತಿ ನೀಡಿದ್ದಾರೆ.

Edited By :
PublicNext

PublicNext

26/09/2020 11:04 pm

Cinque Terre

85.01 K

Cinque Terre

1

ಸಂಬಂಧಿತ ಸುದ್ದಿ