ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ದೇವತ್ಕಲ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂರಿಂದ ಶಿಲಾನ್ಯಾಸ,.!

ಯಾದಗಿರಿ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮತ್ತು ಸುರಪುರ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಅಂದಾಜು ಮೊತ್ತ 1,060 ಕೋಟಿ ರೂ. ವೆಚ್ಚದ ಒಟ್ಟು 102 ಕಾಮಗಾರಿಗಳನ್ನು ದೇವತ್ಕಲ್ ಗ್ರಾಮದಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

ಬಳಿಕ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಶಾಸಕ ರಾಜುಗೌಡ ಅವರು, ವಿಕಲಚೇತನರು ಸೇರಿದಂತೆ ಹಲವು ಇಲಾಖೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಿದರು. ಇನ್ನು ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ, ಶಿಶು ಅಭಿವೃದ್ಧಿ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಮಳಿಗೆಗಳಲ್ಲಿ ವೆರೈಟಿ ವೆರೈಟಿ ತಿಂಡಿ ತಿನಿಸು, ಹಣ್ಣು, ತರಕಾರಿ ಹಾಗೂ ಹಲವು ಯೋಜನೆಗಳ ಬಗ್ಗೆ ಉಪಯುಕ್ತ ಮಾಹಿತಿ ದೊರಕಿಸುವ ಮಳಿಗೆಗಳು ನೋಡುಗರ ಕಣ್ಮನಸೆಳೆದವು.

ಇದಲ್ಲದೇ ವೇದಿಕೆ ಮೇಲೆ ತಮಟೆ ಬಾರಿಸುವುದು ಕಂಡ ಸಚಿವ ಆರ್. ಅಶೋಕ್ ಹಾಗೂ ರಾಜುಗೌಡ ಅವರು ತಮಟೆ ಬಾರಿಸಿ ಜನರನ್ನ ರಂಜಿಸಿದರು. ಕಾರ್ಯಕ್ರಮದ ಬೃಹತ್ ವೇದಿಕೆಗೆ ಸಿಎಂ ಬೊಮ್ಮಾಯಿ, ಗೋವಿಂದ ಕಾರಜೋಳ, ಆರ್. ಅಶೋಕ್, ಸಚಿವ ಪ್ರಭು ಚವಾಣ್, ಜಿಲ್ಲಾಧಿಕಾರಿ ಸೇರಿ ಬಿಜೆಪಿ ಮುಖಂಡರು ತೆರೆದ ವಾಹನದಲ್ಲಿ ಬಂದಿಳಿದರು. ಶಾಸಕ ರಾಜುಗೌಡ ಅವರೇ ಟ್ರ್ಯಾ ಕ್ಟರ್ ಅನ್ನು ಚಾಲನೆ ಮಾಡಿ ಕರೆದುಕೊಂಡು ಬಂದರು. ವಿವಿಧ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿ ಸಿಎಂ ಅವರು ದೊರನಹಳ್ಳಿ ಗ್ರಾಮಕ್ಕೆ ತೆರಳಿದರು.

ಇನ್ನು ಇವತ್ತು ರಾತ್ರಿ ದೇವತ್ಕಲ್ ಗ್ರಾಮದಲ್ಲೇ ಸಚಿವ ಆರ್. ಅಶೋಕ್ ಅವರು, ಗ್ರಾಮ ವಾಸ್ತವ್ಯ ಮಾಡಿ ಗ್ರಾಮದಲ್ಲಿನ ಸಮಸ್ಯೆ ಆಲಿಸಲಿದ್ದಾರೆ.

Edited By : Nagesh Gaonkar
PublicNext

PublicNext

19/03/2022 08:49 pm

Cinque Terre

54.96 K

Cinque Terre

0

ಸಂಬಂಧಿತ ಸುದ್ದಿ