ಜೈಪುರ್: ಅಮಾನತುಗೊಂಡ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಇಬ್ಬರು ದುಷ್ಕರ್ಮಿಗಳು ಟೈಲರ್ ಒಬ್ಬರ ಶಿರಚ್ಛೇದನ ಮಾಡಲಾಗಿದೆ.
ಈ ಘಟನೆ ರಾಜಸ್ಥಾನದ ಉದಯ್‌ಪುರದ ಮಾಲ್ದಾಸ್ ಪ್ರದೇಶದಲ್ಲಿ ಇಂದು ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಕನ್ನಯ್ಯಲಾಲ್ ತೇಲಿ ಎಂದು ಗುರುತಿಸಲಾಗಿದೆ. ತೇಲಿ ಅವರು ದನ್ಮಂಡಿ ಪ್ರದೇಶದಲ್ಲಿ 'ಸುಪ್ರೀಮ್ ಟೈಲರ್' ಹೆಸರಿನ ಅಂಗಡಿಯನ್ನು ಹೊಂದಿದ್ದರು.
ಬಟ್ಟೆ ಹೊಲಿಸುವ ಸೋಗಿನಲ್ಲಿ ಬಂದ ಹಂತಕರು ಕನ್ನಯ್ಯಲಾಲ್ ತೇಲಿ ಜೊತೆಗೆ ಮಾತನಾಡಿದ್ದಾರೆ. ಬಳಿಕ ಮಚ್ಚಿನಿಂದ ದಾಳಿ ನಡೆಸಿ ಕತ್ತು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿಯ ಮಾಜಿ ವಕ್ತಾರೆ ನೂಪುರ ಶರ್ಮಾ ಹೇಳಿಕೆ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆದಿದೆ. ಹತ್ಯೆ ಬಳಿಕ ಹಂತಕರು ಪ್ರಧಾನಿ ನರೇಂದ್ರ ಮೋದಿಗೂ ವಿಡಿಯೋದಲ್ಲಿ ಬೆದರಿಕೆ ಹಾಕಿದ್ದಾರೆ.
PublicNext
28/06/2022 07:25 pm