ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆಯನ್ನು ಕೆಲವರು ಸ್ವಾಗತಿಸಿದರೆ ಇನ್ನು ಕೆಲವರು ವಿರೋಧಿಸುತ್ತಿದ್ದಾರೆ. ರೈತರಂತು ಮಸೂದೆ ವಿರೋಧಿಸಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಪರಸ್ಪರ ವಾದ, ವಿವಾದ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ಬಾಲಿವುಡ್ ನಟಿ ತಾಪ್ಸೀ ಪನ್ನು ಅವರು ಟ್ವೀಟ್ ಮಾಡಿದ್ದರು. ತಾಪ್ಸೀ ಟ್ವೀಟ್ ಗೆ ಮೈಸೂರು ಸಂಸದ ಪ್ರತಾಪ್ ಸಿಂಹ ರೀ ಟ್ವೀಟ್ ಮಾಡಿದ್ದಾರೆ.
'ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲ್ಲಾಡಿಸುವುದಾದರೆ… ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಬದಲಿಗೆ ಉಳಿದವರಿಗೆ ಆದರ್ಶದ ಪಾಠ ಮಾಡಲು ಬರಬೇಡಿ' ಎಂದು ನಟಿ ತಾಪ್ಸಿ ಟ್ವೀಟ್ ಮಾಡಿದ್ದರು.
ಅದು ಎಲ್ಲಡೆ ವೈರಲ್ ಆಗಿತ್ತು. ಅದೇ ಶೈಲಿಯಲ್ಲಿ ಪ್ರತಾಪ್ ಸಿಂಹ ಈಗ ಪ್ರತಿಕ್ರಿಯಿಸಿದ್ದಾರೆ.
'ಓ ತಾಪ್ಸೀ, ಒಬ್ಬ ರಶೀದ್ ನಿಂದಾಗಿ ಇಡೀ ಮುಸ್ಲಿಂ ಸಮುದಾಯವನ್ನು ಕೆರಳುವಂತೆ ಮಾಡಿದ ಒಂದು ಕಾರ್ಟೂನ್ ವಿಶ್ವದ ಮುಸ್ಲಿಂಮರು ಕೆರಳುವಂತೆ ಮಾಡಿದ, ಒಂದು ಪುಸ್ತಕ (The da Vinci Code) ವಿಶ್ವದ ಕ್ರಿಶ್ಚಿಯನ್ನರನ್ನು ಕೆರಳಿಸಿತು, ಒಮ್ಮೆ ಕೆನ್ನೆಗೆ ಬಾರಿಸಿದ್ದಕ್ಕೆ ನೀವು ಮದುವೆ ಮುರಿದುಕೊಂಡ್ರಿ. ಸ್ಕ್ರಿಪ್ಟೆಡ್ ಸಿನಿಮಾ ಡೈಲಾಗ್ ಗಳಿಗೆ ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಳಿ. ಬಾಕಿ ಎಲ್ಲವೂ ನಿಮ್ಮ ಜ್ಞಾನದ ಹೊರಗಿದೆ' ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ನ 'ಥಪ್ಪಡ್' ಸಿನಿಮಾದಲ್ಲಿ ತಾಪ್ಸೀ ನಟಿಸಿದ್ದರು. ತನ್ನ ಗಂಡ ಒಂದು ಬಾರಿ ಕೆನ್ನೆಗೆ ಹೊಡೆದ ಎಂಬ ಕಾರಣಕ್ಕೆ ವಿಚ್ಛೇದನ ಪಡೆಯುವ ಮಹಿಳೆಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಅದೇ ವಿಚಾರವನ್ನು ಇಟ್ಟುಕೊಂಡು ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದ್ದಾರೆ.
PublicNext
06/02/2021 03:34 pm