ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿಆರ್ ಎಸ್ ಶಾಸಕ ನರಸಿಂಹಯ್ಯ ವಿಧಿವಶ

ಹೈದರಾಬಾದ್ : ವಯೋ ಸಂಬಂಧಿ ಕಾಯಿಲೆಯಿಂದ 64 ವರ್ಷದ ತೆಲಂಗಾಣದ ಟಿಆರ್ ಎಸ್ ಶಾಸಕ ನೋಮುಲಾ ನರಸಿಂಹಯ್ಯ ಅವರು ಮಂಗಳವಾರ ನಿಧನರಾದರು.

ನಲ್ಗೊಂಡ ಜಿಲ್ಲೆಯ ನಾಗಾರ್ಜುನ ಸಾಗರ್ ಕ್ಷೇತ್ರದ ಶಾಸಕ ನರಸಿಂಹಯ್ಯ ಅವರು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು.

ಮಂಗಳವಾರ ಬೆಳಿಗ್ಗೆ 5.30ಕ್ಕೆ ಅವರು ಕೊನೆ ಉಸಿರೆಳೆದರು ಎಂದು ಮೂಲಗಳು ಹೇಳಿವೆ.

ನರಸಿಂಹಯ್ಯ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

2014ರಲ್ಲಿ ಟಿ ಆರ್ ಎಸ್ ಗೆ ಸೇರುವ ಮುನ್ನ ಅವರು ಸಿಪಿಐ(ಎಂ) ಪಕ್ಷದಲ್ಲಿದ್ದರು.

ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು,' ನರಸಿಂಹಯ್ಯ ತಮ್ಮ ಜೀವನ ಪೂರ್ತಿ ಜನರ ಸೇವೆಗಾಗಿ ದುಡಿದರು.

ಅವರ ಸೇವೆಯನ್ನು ಸದಾ ಸ್ಮರಿಸಲಾಗುವುದು' ಎಂದು ಟ್ವೀಟ್ ಮಾಡಿದ್ದಾರೆ.

ಟಿಆರ್ ಎಸ್ ಮತ್ತು ರಾಜ್ಯದ ಹಲವು ಸಚಿವರು ಸಂತಾಪ ಸೂಚಿಸಿದರು.

Edited By : Nirmala Aralikatti
PublicNext

PublicNext

01/12/2020 01:57 pm

Cinque Terre

35.76 K

Cinque Terre

0

ಸಂಬಂಧಿತ ಸುದ್ದಿ