ಮುಲ್ಕಿ: ಪಕ್ಷಿಕೆರೆ ಹರಿಪಾದ ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ) ಆಶ್ರಯದಲ್ಲಿ ಕೆಮ್ರಾಲ್ ಪಂಜದಗುತ್ತು ಶ್ರೀ ಶಾಂತಾರಾಮ ಶೆಟ್ಟಿ ಪ್ರೌಡ ಶಾಲೆ ನ ಶಾಲಾ ವಠಾರದಲ್ಲಿ ಪರಿಸರ ದಿನ, ವನಮಹೋತ್ಸವ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಾಲು ಮರದ ತಿಮ್ಮಕ್ಕ ಅಭಿಮಾನಿ ಬಳಗ ಪಕ್ಷಿಕೆರೆ ಯ ವಾಲ್ಟರ್ ಡಿ ಸೋಜ ಪಕ್ಷಿಕೆರೆ , ಪಂಜದಗುತ್ತು ಶ್ರೀ ಶಾಂತಾರಾಮ ಶೆಟ್ಟಿ ಪ್ರೌಡ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್ ಕುಲಾಲ್ ಪಂಜ, ಬಸ್ಸು ಚಾಲಕರು ಹಾಗೂ ನಿರ್ವಾಹಕರ ಸಂಘ (ರಿ) ಕಿನ್ನಿಗೋಳಿ ಯ ಅಧ್ಯಕ್ಷ ರಾಮ್ ಪ್ರಸಾದ್ ಕೊಯಿಕುಡೆ, ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ) ನ ಗೌರವಾಧ್ಯಕ್ಷ ರಾಮದಾಸ್ ಶೆಟ್ಟಿ, ಅಧ್ಯಕ್ಷ ರಾಮಚಂದ್ರ, ಹಾಗೂ ಸದಸ್ಯರು ಒಟ್ಟುಗೂಡಿ ಗಿಡವನ್ನು ನೆಡುವಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು
Kshetra Samachara
26/06/2022 11:46 am