ಮುಲ್ಕಿ: ಮಂಗಳೂರು ಗೋವನಿತಾಶ್ರಮ ಟ್ರಸ್ಟ್ (ರಿ.) ವತಿಯಿಂದ ನಡೆಯುವ ಗೋವಿಗಾಗಿ ಹೊರೆಕಾಣಿಕೆ ಅರ್ಪಣೆ ಹಾಗೂ ಗೋಪೂಜೆ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮುಲ್ಕಿ ಪ್ರಖಂಡ ವತಿಯಿಂದ ಭಾನುವಾರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭ ಮುಲ್ಕಿ ವಿಶ್ವ ಹಿಂದೂ ಪರಿಷತ್ ಪ್ರಖಂಡದ ಕಾರ್ಯದರ್ಶಿ ಶ್ಯಾಮಸುಂದರ್ ಶೆಟ್ಟಿ ಮಾತನಾಡಿ ಗೋವು ದೇವರ ಸಮಾನವಾಗಿದ್ದು ಗೋವಿನ ಹಸಿವೆ ನೀಗಿಸುವ ದೃಷ್ಟಿಯಲ್ಲಿ ವಿವಿಧ ಹಿಂದೂ ಸಂಘಟನೆಗಳ ವತಿಯಿಂದ ಬೃಹತ್ ಹೊರೆಕಾಣಿಕೆ ಸಮರ್ಪಣ ಕಾರ್ಯ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಆರಂಭಗೊಂಡಿದೆ ಎಂದರು.
ಈ ಸಂದರ್ಭ ಹಿಂದೂ ಸಂಘಟನೆಗಳ ನಾಯಕರಾದ ಅಮಿತ್ ರಾಜ್, ವಿನೋದ್ ಸಾಲಿಯಾನ್ ಬೆಳ್ಳಾಯರು, ಶ್ಯಾಮ್ ಪ್ರಸಾದ್, ಭುವನಾಭಿರಾಮ ಉಡುಪ,ಈಶ್ವರ್ ಕಟೀಲು, ಕಸ್ತೂರಿ ಪಂಜ, ಸುನಿಲ್ ಆಳ್ವ, ಶರತ್ ಕುಬೆವೂರು, ಸುಭಾಷ್ ಶೆಟ್ಟಿ, ಸತೀಶ್ ಅಂಚನ್, ವಿಠ್ಠಲ್ ಎನ್.ಎಂ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಬೃಹತ್ ಮೆರವಣಿಗೆ ಮೂಲಕ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು.
Kshetra Samachara
14/11/2021 03:26 pm