ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ನಾನಾ ಕಡೆ ಮಳೆ, ವಿದ್ಯುತ್ ವ್ಯತ್ಯಯ, ಅಡಕೆ ಕೃಷಿ ಕರು ಕಂಗಾಲು

ಸುಳ್ಯ: ಸುಳ್ಯ, ಕಡಬ ತಾಲೂಕಿನ ವಿವಿಧ ಕಡೆ ಮಂಗಳವಾರ ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ.

ಉಭಯ ತಾಲೂಕಿನ ನಾನಾ ಭಾಗಗಳಲ್ಲಿ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ. ಹಲವು ಕಡೆ ಚೆನ್ನಾಗಿ ಮಳೆ ಸುರಿದರೆ, ಕೆಲವು ಕಡೆ ಸ್ವಲ್ಪ ಮಟ್ಟಿನ ಮಳೆಯಾಗಿದೆ. ಕೆಲವೆಡೆ ಗಾಳಿಯೂ ಬೀಸಿದ್ದು, ಕಡಬ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಅಡಿಕೆ ಕೃಷಿಕರು ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆ ಒದ್ದೆಯಾಗಿದ್ದು,ಏಕಾಏಕಿ ಸುರಿದ ಮಳೆಗೆ ಕೃಷಿಕರು ಕಂಗಾಲಾಗಿದ್ದಾರೆ. ಕೆಲವು ದಿನಗಳಿಂದ‌ ಸುಳ್ಯ, ಕಡಬ ತಾಲೂಕಿನಾದ್ಯಂತ ಹೆಚ್ಚಿನ ಬಿಸಿಲಿನ ವಾತಾವರಣವಿದ್ದು, ಮಳೆ ಬರುವ ಮುನ್ಸೂಚನೆ ಇತ್ತು.

Edited By : Vijay Kumar
Kshetra Samachara

Kshetra Samachara

08/12/2020 09:26 pm

Cinque Terre

6.83 K

Cinque Terre

0

ಸಂಬಂಧಿತ ಸುದ್ದಿ