ಚಾರ್ಮಾಡಿ: ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಅಲೇಕಾನ್ ಬಳಿ ಸಂಜೆ ವೇಳೆ ಬೃಹದಾಕಾರದ ಬಂಡೆಯೊಂದು ರಸ್ತೆಗೆ ಉರುಳಿ ಬಿದ್ದಿದೆ.
ಆ ಸಮಯದಲ್ಲಿ ಯಾವುದೇ ವಾಹನ ಸಂಚರಿಸಿರದ ಕಾರಣ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ.
ಸಂಜೆ 3 ಗಂಟೆಯ ಸಮಯದಲ್ಲಿ ಅಲೇಕಾನ್ ಜಲಪಾತದ ಸಮೀಪದ ಗುಡ್ಡದಿಂದ ಬೃಹತ್ ಬಂಡೆಯೊಂದು ಆಕಸ್ಮಿಕವಾಗಿ ಉರುಳಿ ರಸ್ತೆಯ ಬದಿಗೆ ಬಿದ್ದಿದೆ.
ಆದರೆ, ಇದರಿಂದ ಯಾವುದೇ ವಾಹನ ಸಂಚಾರಕ್ಕೆ ಅಡಚಣೆಯಾಗಿಲ್ಲ. ಬೃಹತ್ ಬಂಡೆಯನ್ನು ಸಂಜೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತೆರವು ಗೊಳಿಸುವುದಾಗಿ ತಿಳಿಸಿದ್ದಾರೆ.
ಬಂಡೆ ಬಿದ್ದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಸಂಚಾರ ಯಥಾ ಪ್ರಕಾರ ಮುಂದುವರಿದಿದೆ.
Kshetra Samachara
17/10/2020 08:01 pm