ಮುಲ್ಕಿ: ಲಯನ್ಸ್ ಕ್ಲಬ್ ಕರ್ನಿರೆ ಬಳ್ಕುಂಜೆ ಜಲಯೋಧರ ಪ್ರಾಯೋಜಕತ್ವದಲ್ಲಿ ಕೃಷಿಕರಾದ ರವೀಂದ್ರ ಪೈ, ರಾಜೇಶ್, ಕಿಶೋರ್ , ಸುನಿಲ್ , ನವೀನ ಪೂಜಾರಿ, ಕಿಶೋರ್ ಪೈ ಪ್ರಯತ್ನದಲ್ಲಿ ಜಲಯೋಧ ಲಯನ್ ಫ್ರಾನ್ಸಿಸ್ ಮಿನೇಜಸ್ ಮಾರ್ಗದರ್ಶನದಲ್ಲಿ ಕವತ್ತಾರು ಜೋಗಿ ದೊಟ್ಟು ಬಳಿ ಹೊಳೆಗೆ ಸಾಂಪ್ರದಾಯಿಕ ಕಟ್ಟ ಕಟ್ಟುವ ಕಾರ್ಯ ಯಶಸ್ವಿಯಾಗಿದೆ.
ಈ ಮೂಲಕ ಕೃಷಿ ಭೂಮಿಗೆ ನೀರಾವರಿ ಮತ್ತು ಅಂತರ್ಜಲ ವೃದ್ಧಿಗೆ ಯೋಜನೆ ಸಹಕಾರಿಯಾಗಿದೆ. ಈ ಸಂದರ್ಭ ಲಯನ್ಸ್ ಅಧ್ಯಕ್ಷ ನೆಲ್ಸನ್ ನಾರ್ಬರ್ಟ್ ಲೋಬೊ ಮಾತನಾಡಿ, ಕರ್ನಿರೆ ಬಳ್ಕುಂಜೆ ಲಯನ್ಸ್ ಕ್ಲಬ್ ನಿಂದ ಅಂತರ್ಜಲ ಉಳಿಸಿ ಅಭಿಯಾನದ ವರ್ಷದ 4ನೇ ಯೋಜನೆಯಾಗಿದ್ದು, ಕೃಷಿ ಮತ್ತು ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ. ಕವತ್ತಾರು ಶ್ರೀ ಧೂಮಾವತಿ ದೈವಸ್ಥಾನ ಪರಿಸರದ ಸುಮಾರು100 ಎಕರೆ ಜಾಗಕ್ಕೆ ನೀರು ಒದಗಿಸಲಿದೆ ಮತ್ತು ಹತ್ತಿರದ ಭೂಮಿಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದರು.
ಕಾರ್ಯದರ್ಶಿ ಸತೀಶ್ ಕುಮಾರ್ , ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಮತ್ತು ಸದಸ್ಯರಾದ ಆಸ್ಟಿನ್ ಸಿಕ್ವೇರಾ, ರವೀಂದ್ರ ಶೆಟ್ಟಿ , ಫ್ರಾನ್ಸಿಸ್ ಮಿನೇಜಸ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
09/02/2021 07:11 pm