ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ : ಡ್ರೈನೇಜ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಗ್ರಾಮ ಪಂಚಾಯತ್

ಪಡುಬಿದ್ರಿ : ಗ್ರಾ.ಪಂ. ಎಚ್ಚರಿಕೆಯ ಹೊರತಾಗಿಯೂ ಡ್ರೈನೇಜ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದವರಿಗೆ ಪಡುಬಿದ್ರಿ ಗ್ರಾ.ಪಂ.ಬಿಸಿ ಮುಟ್ಟಿಸಿದೆ. ವ್ಯಾಪಾರಸ್ಥರನ್ನು ತೆರವುಗೊಳಿಸಿ ಮುಂದೆ ತಪ್ಪು ಪುನರಾವರ್ತನೆ ಆದಲ್ಲಿ ದಂಡ ನೀಡಬೇಕಾದೀತು ಎಂದು ಗ್ರಾ.ಪಂ. ಪಿಡಿಒ ಮಂಜುನಾಥ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಹಲವರು ಮಳೆನೀರು ಹರಿದು ಹೋಗುವ ಡ್ರೈನೇಜ್ ಮೇಲ್ಭಾಗದಲ್ಲಿ ಸಾಮಾಗ್ರಿಗಳನ್ನಿಟ್ಟು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಈ ಬಗ್ಗೆ ತಿಂಗಳ ಹಿಂದೆಯೇ ವ್ಯಾಪಾರಿಗಳಿಗೆ ಗ್ರಾ.ಪಂ. ಎಚ್ಚರಿಕೆ ನೀಡಿತ್ತು.

ಎಚ್ಚರಿಕೆಗೆ ಕ್ಯಾರೇ ಎನ್ನದ ಕೆಲ ವ್ಯಾಪಾರಿಗಳು ಡ್ರೈನೇಜ್ ದಾಟಿ ರಸ್ತೆಗಂಟಿಕೊಂಡೇ ವ್ಯಾಪಾರ ವಹಿವಾಟು ನಡೆಸುತ್ತಿದ್ದರು.ಗ್ರಾ.ಪಂ ಅಧ್ಯಕ್ಷರು ದಿಢೀರ್ ಸಿಬ್ಬಂದಿಗಳೊಂದಿಗೆ ತೆರಳಿ ವ್ಯಾಪಾರ ಸಾಮಾಗ್ರಿಗಳನ್ನು ತೆರವುಗೊಳಿಸಿದರು. ಇದೇ ಚಾಳಿ ಮುಂದುವರೆಸಿದರೆ ಅಂತಹ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪಿಡಿಓ ಮಂಜುನಾಥ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

Edited By : Ashok M
PublicNext

PublicNext

10/12/2024 02:15 pm

Cinque Terre

20.61 K

Cinque Terre

0

ಸಂಬಂಧಿತ ಸುದ್ದಿ