ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗೀತಾ ಜಯಂತಿ ಅಂಗವಾಗಿ ಕೃಷ್ಣಮಠದಲ್ಲಿ ವಿಶೇಷ ಪೂಜೆ ,ರಥೋತ್ಸವ

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಗೀತಾ ಮಹೋತ್ಸವದ ಗೀತಾ ಜಯಂತಿ ಅಂಗವಾಗಿ ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀಗಳಾದ ಸುಶ್ರೀಂದ್ರತೀರ್ಥ ಶ್ರೀಪಾದರು ಕೃಷ್ಣನಿಗೆ ಗೀತಾಮೃತಮಹೋದಧಿ ಅಲಂಕಾರವನ್ನು ಮಾಡಿದರು. ನಂತರ ಪರ್ಯಾಯ ಪೀಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಹಾ ಪೂಜೆಯನ್ನು ಮಾಡಿದರು.

ಗೀತಾ ಜಯಂತಿಯ ಅಂಗವಾಗಿ ರಥಬೀದಿಯಲ್ಲಿ ಚಿನ್ನದ ರಥದಲ್ಲಿ ಗೀತಾ ಪುಸ್ತಕವನ್ನಿಟ್ಟು ಭಕ್ತರನ್ನೊಳಗೊಂಡು ಅತ್ಯಂತ ವೈಭವದಿಂದ ರಥೋತ್ಸವ ಜರುಗಿತು. ಕಾರ್ಯಕ್ರಮವನ್ನು ನವದೆಹಲಿಯ ಸ್ವಾಮಿ ನಾರಾಯಣ ರಿಸರ್ಚ್ ಇನ್ ಸ್ಟಿಟ್ಯೂಟ್ ಮಹಾಮಹೋಪಾಧ್ಯಾಯ ಸಾಧು ಶ್ರೀ ಭದ್ರೇಶದಾಸ್ ಉದ್ಘಾಟಿಸಿದರು.

ರಥಬೀದಿಯಲ್ಲಿ ನಡೆದ ರಥೋತ್ಸವದಲ್ಲಿ ನೂರಾರು ಆಸ್ತಿಕರು ಪಾಲ್ಗೊಂಡರು.'ಮಹಾಭಾರತ' ಧಾರಾವಾಹಿಯ ಕೃಷ್ಣ ಪಾತ್ರಧಾರಿ ನಿತೀಶ್ ಭಾರದ್ವಾಜ್, ನಿರೂಪಕ ಮಾಸ್ಟರ್ ಆನಂದ್, ಉದ್ಯಮಿ ಭುವನೇಂದ್ರ ಕಿದಿಯೂರು ಮತ್ತು ಶತಾವಧಾನಿ ಡಾ. ರಾಮನಾಥ ಆಚಾರ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

Edited By : Somashekar
PublicNext

PublicNext

11/12/2024 03:24 pm

Cinque Terre

6.43 K

Cinque Terre

0

ಸಂಬಂಧಿತ ಸುದ್ದಿ