ಮುಲ್ಕಿ: ರಾಜ್ಯ ಸರಕಾರದ 14 ನೇ ಹಣಕಾಸು ಯೋಜನೆಯಡಿಯಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಇಡ್ಯಾ ಪಶ್ಚಿಮ ವಾರ್ಡ್ ನಂ. 7 ಸುರತ್ಕಲ್ ನಟರಾಜ್ ಟಾಕೀಸಿನಿಂದ ಸುರತ್ಕಲ್ ಸರ್ವೀಸ್ ಬಸ್ ನಿಲ್ದಾಣದವರೆಗೆ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ಹೆದ್ದಾರಿ ದೀಪ ಅಳವಡಿಸಿದ್ದು, ಶಾಸಕ ಡಾ.ವೈ. ಭರತ್ ಶೆಟ್ಟಿ ಮಂಗಳವಾರ ಉದ್ಘಾಟಿಸಿದರು.
ಸ್ಥಳೀಯ ಕಾರ್ಪೊರೇಟರ್ ನಯನ ಆರ್. ಕೋಟ್ಯಾನ್, ಸರಿತಾ ಶಶಿಧರ್, ಉತ್ತರ ಮಂಡಲದ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷ ಗಂಗಾಧರ ಸನಿಲ್, ಕಾರ್ಯದರ್ಶಿ ರಾಘವೇಂದ್ರ ಶೆಣೈ,ಬಿಜೆಪಿ ಮುಖಂಡರಾದ ಜಯಂತ್ ಸಾಲ್ಯಾನ್,ಸಂದೇಶ್ ಇಡ್ಯಾ,ದಿನಕರ್ ಇಡ್ಯಾ,ದಿವೇಶ್ ಪೂಜಾರಿ,ಸುರೇಶ್ ಸಾಲ್ಯಾನ್,ಮನೀಶ್, ಉದಯ ಆಳ್ವ, ಸುರತ್ಕಲ್ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಲತೀಫ್ , ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
20/01/2021 05:02 pm