ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಗೀತಾಜಯಂತಿ ಆಚರಣೆ; ಭಗವದ್ಗೀತೆ ಆಧಾರಿತ ಪ್ರಬಂಧ ಸ್ಪರ್ಧೆ

ಬಂಟ್ವಾಳ: ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ಮಂಗಳೂರು ಇದರ ಬಂಟ್ವಾಳ ಘಟಕ ಆಶ್ರಯದಲ್ಲಿ ಡಿ.25 ರಂದು ನಡೆಯಲಿರುವ ಗೀತಾ ಜಯಂತಿ ಆಚರಣೆ ಅಂಗವಾಗಿ ವಿವಿಧ ಹಂತದ ವಿದ್ಯಾರ್ಥಿಗಳಿಗೆ ಶ್ರೀಮದ್ಭಗವದ್ಗೀತೆ ಆಧಾರಿತ ಪ್ರಬಂಧ ಸ್ಪರ್ಧೆ ನಡೆಯಲಿದೆ.

ವಿಷಯಗಳು ಹೀಗಿವೆ.

1. ಪ್ರಾಥಮಿಕ ಹಂತದಲ್ಲಿ (5 ರಿಂದ 8ನೇ ತರಗತಿ ಮಕ್ಕಳು) ಯಶೋದೆಯ ಮಡಿಲಲ್ಲಿ ಶ್ರೀ ಕೃಷ್ಣ, 2. ಪ್ರೌಢಶಾಲಾ ಹಂತ (9 ರಿಂದ 12 ತರಗತಿ ಮಕ್ಕಳಿಗೆ) ಶ್ರೀ ಕೃಷ್ಣನ ಬಾಲಲೀಲೆಗಳ ಸಂದೇಶ.

3. ಪದವಿ ಹಂತದ ವಿದ್ಯಾರ್ಥಿಗಳಿಗೆ ಸರ್ವ ಸ್ಪರ್ಶಿ ಭಗವದ್ಗೀತಾ 4. ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳಿಗೆ ಗೀತಾಧ್ಯಯನ ಶೀಲಸ್ಯ ಪ್ರಾಣಾಯಾಮ ಪರಸ್ಯ ಚ ನೈವ ಸಂತಿ ಹಿ ಪಾಪಾನಿ ಪೂರ್ವಜನ್ಮ ಕೃತಾನಿ ಚ ಈ ಮೇಲಿನ ಶ್ಲೋಕ ಆಧರಿಸಿದ ವಿಶ್ಲೇಷಣಾತ್ಮಕ ಪ್ರಬಂಧ ಬರೆಯಲು ಅವಕಾಶವಿದೆ.

ಪ್ರಬಂಧಗಳು ಎ4 ಅಳತೆ ಪೇಪರ್ ನಲ್ಲಿ 4 ಪುಟಗಳ ಮಿತಿಯಲ್ಲಿ ಇರಬೇಕು. ಪ್ರಬಂಧ ಬರೆದು ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬೇಕಾದ ವಿಳಾಸ: ಅಧ್ಯಕ್ಷರು, ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ, ಶ್ರೀ ಲಕ್ಷ್ಮೀ ನರಸಿಂಹ ಕ್ಲಿನಿಕ್, ಉಪೇಂದ್ರ ಸೌಧ, ಬಿ.ಸಿ.ರೋಡ್, ಬಂಟ್ವಾಳ ತಾಲೂಕು, ದ.ಕ. - 574219, ಪ್ರಬಂಧಗಳನ್ನು ಎ4 ಅಳತೆಯ ಪೇಪರ್ ನಲ್ಲಿ ಬರೆದು ಸ್ಕ್ಯಾನ್ ಮಾಡಿ ಇಲ್ಲವೇ ನೇರವಾಗಿ ಇ-ಮೈಲ್ ಮೂಲಕವೂ ಕಳುಹಿಸಬಹುದು.

ಕೊನೆ ದಿನಾಂಕ ಡಿಸೆಂಬರ್ 23. E-Mail address:damodar.e1@gmail.com ಸ್ಪರ್ಧಾ ನಿರ್ಣಾಯಕರ ತೀರ್ಪು ಅಂತಿಮ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಶಿವಪ್ರಸಾದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

07/12/2020 09:44 pm

Cinque Terre

5.46 K

Cinque Terre

2

ಸಂಬಂಧಿತ ಸುದ್ದಿ