ಮುಲ್ಕಿ: ಸ್ವಚ್ಛ ಸುರತ್ಕಲ್ ಅಭಿಯಾನ ಸುರತ್ಕಲ್‌ನಲ್ಲಿ ನಡೆಯಿತು. ಈ ಸಂದರ್ಭ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಕೆ.ರಾಜಮೋಹನ್ ರಾವ್ ನೇತೃತ್ವದಲ್ಲಿ ಡಾ. ಚಿತ್ರಲೇಖಾ, ರೋಟರಿ ಕ್ಲಬ್ ಸುರತ್ಕಲ್ ನ ನಿಯೋಜಿತ ಅಧ್ಯಕ್ಷ ಚಂದ್ರಕಾಂತ್ ಮರಾಠೆ, ನಾಗರಿಕ ಸಲಹಾ ಸಮಿತಿಯ ಭರತ್ ಶೆಟ್ಟಿ, ಕುಳಾಯಿ ನಾಗರಿಕ ಸಮಿತಿಯ ರಮೇಶ್ ಅಳಪೆ, ಕುಳಾಯಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಪಿ.ಚಂದ್ರಶೇಖರ್ , ವೃಂದಾವನ ನಗರ ಹಿತವೇದಿಕೆಯ ಅಧ್ಯಕ್ಷ ಜಯ ಶಂಕರ್, ಸ್ವಚ್ಛ ಸುರತ್ಕಲ್ ಅಭಿಯಾನದ ಸಂಯೋಜಕ ಸತೀಶ್ ಸದಾನಂದ್ ಸಹಿತ ತಂಡದವರು ಸುರತ್ಕಲ್ ಭಾರತ್ ಬ್ಯಾಂಕ್ ಬಳಿ ಸ್ಥಳೀಯ ಅಂಗಡಿ ಮಾಲೀಕರು ಎಸೆದ ಕಸದೊಂದಿಗೆ ಅವರ ಮಳಿಗೆಗೆ ತೆರಳಿ ಸ್ವಚ್ಛತೆಯ ಅರಿವು ಮೂಡಿಸಿದಾಗ ಅಂಗಡಿ ಮಾಲೀಕರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಇನ್ನು ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲ ಹಾಗೂ ಕಸ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಒಪ್ಪಿ ಕೊಂಡಿದ್ದಾರೆ.
ಮನಪಾ ಆರೋಗ್ಯ ಅಧಿಕಾರಿ ಸುಶಾಂತ್, ಮೇಲ್ವಿಚಾರಕ ಪ್ರವೀಣ್, ಆಂಟೊನಿ ವೇಸ್ಟ್ ಮ್ಯಾನೇಜ್ ಮೆಂಟ್ ಸಂಸ್ಥೆ ಮೇಲ್ವಿಚಾರಕ ಸುಭಾಶ್ ಅವರನ್ನೊಳಗೊಂಡ ತಂಡ ಪ್ರಸ್ತುತ ನಾನಾ ಮಳಿಗೆಗಳಿಗೆ ಭೇಟಿ ನೀಡಿ ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆದುದಕ್ಕಾಗಿ ತಲಾ 1000 ರೂ. ದಂಡ ವಿಧಿಸಿದರು.
Kshetra Samachara
30/11/2020 09:34 pm