ಮುಲ್ಕಿ: ಸುರತ್ಕಲ್ ಮಹಾನಗರ ಪಾಲಿಕೆ ಉಪಕಚೇರಿಯಲ್ಲಿ ಬುಧವಾರ ನೀರಿನ ಅದಾಲತ್ ಜರುಗಿತು.
ಮೇಯರ್ ದಿವಾಕರ ಪಾಂಡೇಶ್ವರ ಭಾಗವಹಿಸಿ ಮಾತನಾಡಿ, ನೀರಿನ ಅದಾಲತ್ ಮೂಲಕ ಸಾರ್ವಜನಿಕರ ಸಮಸ್ಯೆ ಬಗ್ಗೆ ಹರಿಸಿ, ಕ್ಲಪ್ತ ಸಮಯದಲ್ಲಿ ನೀರಿನ ಬಿಲ್ ಕಟ್ಟ ಬೇಕೆಂಬುದು ಉದ್ದೇಶ ಎಂದರು.
ಅದಾಲತ್ ನಲ್ಲಿಮೀಟರ್ ಸಮಸ್ಯೆ,ಹೆಚ್ಚುವರಿ ನೀರಿನ ಬಿಲ್ ಮತ್ತಿತರ ಗೊಂದಲಗಳಿಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಉಪಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್,ಶರತ್ ಕುಮಾರ್,ವಿಪಕ್ಷ ನಾಯಕ ಅಬ್ದುಲ್ ರವೂಫ್,ಮನಪಾ ಸದಸ್ಯರಾದ ನಯನ ಆರ್.ಕೋಟ್ಯಾನ್, ವರುಣ್ ಚೌಟ,ಶ್ವೇತ ಎ., ಶೋಭಾ ರಾಜೇಶ್,ಸರಿತಾ ಶಶಿಧರ್,ಲಕ್ಷ್ಮೀ ಶೇಖರ್ ದೇವಾಡಿಗ,ಲೋಕೇಶ್ ಬೊಳ್ಳಾಜೆ, ಶಂಸಾದ್ ಅಬೂಬಕರ್,ಪಾಲಿಕೆ ಹಿರಿಯ ಅಧಿಕಾರಿಗಳು,ಎಂಜಿನಿಯರ್ ಗಳು ಉಪಸ್ಥಿತರಿದ್ದರು.
Kshetra Samachara
25/11/2020 04:12 pm