ಮಂಡ್ಯ: ಇಂದಿನಿಂದ ಆರಂಭವಾಗಿರುವ ಮಹಾ ಕುಂಭಮೇಳಕ್ಕೆ ಮಂಡ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಮಂಡ್ಯದಲ್ಲಿಂದು ಪ್ರಗತಿಪರ ಸಂಘಟನೆಗಳ ಮುಖಂಡರು ಜಂಟಿ ಸುದ್ದಿಗೋಷ್ಟಿ ನಡೆಸಿ, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು.
ಇಂದಿನಿಂದ ಅ.16 ರವರೆಗೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಅಂಬಿರಗರಹಳ್ಳಿಯಲ್ಲಿ ಕುಂಭಮೇಳ ಆಯೋಜನೆಗೊಂಡಿದೆ. ಉತ್ತರ ಭಾರತದ ಸಂಪ್ರದಾಯವನ್ನ ನಕಲು ಮಾಡಲು ರಾಜ್ಯ ಬಿಜೆಪಿ ಸರ್ಕಾರ ಹೊರಟಿದೆ. ಕುಂಭಮೇಳಕ್ಕೆ ಮಕ್ಕಳು- ಮಹಿಳೆಯರನ್ನ ಬಳಸಿಕೊಳ್ತಿದ್ದಾರೆ. ಡಿಸಿ ಸೇರಿ ಎಲ್ಲಾ ಅಧಿಕಾರಿಗಳು ಕುಂಭಮೇಳದಲ್ಲಿದ್ದಾರೆ. ಬಡತನ ಹೆಚ್ಚಿದ್ದರು, ಕುಂಭಮೇಳ ಆಯೋಜನೆ, ಮೌಢ್ಯ ಬಿತ್ತುವ ಕೆಲಸವನ್ನ ಬಿಜೆಪಿ ಸರ್ಕಾರ ಮಾಡ್ತಿದೆ. ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಕುಂಭಮೇಳಕ್ಕೆ ಹತ್ತಾರು ಕೋಟಿ ವೆಚ್ಚವಾಗ್ತಿದೆ. ಜನರ ದಡ್ಡತನವನ್ನ ಬಿಜೆಪಿ ಬಂಡವಾಳ ಮಾಡಿಕೊಂಡಿದೆ. ಬಿಜೆಪಿಯವರು ದೇವರ ಹೆಸರಲ್ಲಿ ರಾಜಕಾರಣ ಮಾಡ್ತಿದ್ದಾರೆ ಅಂತಾ ಮಂಡ್ಯದಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಆಕ್ರೋಶ ಹೊರ ಹಾಕಿದ್ರು.
PublicNext
13/10/2022 05:46 pm