ಮಂಡ್ಯ : ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅಂತ್ಯಕ್ರಿಯೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಇಂದು ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯುತ್ತಿದೆ.
ಎಸ್ಎಂಕೃಷ್ಣ ಮೃತದೇಹಕ್ಕೆ ಸಹೋದರನ ಪುತ್ರ ಗುರುಚರಣ್, ಮೊಮ್ಮಗ ಸಿದ್ದಾರ್ಥಪುತ್ರ ಅಮರ್ಥ ಹೆಗ್ಡೆ ಮೂಲಕ ಚೀತೆಗೆ ಅಗ್ನಿಸ್ಪರ್ಶ ನೆರೆವರಿಸಲಿದ್ದಾರೆ ಎಂಬ ಮಾಹಿತಿ ಇದೆ. ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಯುತ್ತಿದ್ದು ಇದರಲ್ಲಿ15 ಮಂದಿ ವೇದ ಪಂಡಿತರಿಂದ ವಿಧಿವಿಧಾನ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಆಧ್ಯಾತ್ಮದಲ್ಲಿ ಶ್ರದ್ಧೆ ಇರೋ ಕಾರಣದಿಂದ ವಿವಿಧ ವೇದ ಪುರಾಣಗಳ ಮೂಲಕ ಅಂತಿಮ ಸಂಸ್ಕಾರ ನಡೆಸಲಾಗುತ್ತಿದೆ. ಅಲ್ದೇ ಪಂಜಗೌವ್ಯ ಬಳಸಿ, ಗರುಡಪುರಣದ ಶ್ಲೋಕದ ಮೂಲಕದಿಂದ ಅಗ್ನಿ ಸಂಸ್ಕಾರ ಮಾಡಲಾಗುತ್ತೆ. ಬಾಳೆ ಎಲೆಯ ಮೇಲೆ ದೇಹ ಮುಚ್ಚಿ 50 ಕೆ.ಜಿ.ತುಪ್ಪದ ಮೂಲಕ ದೇಹದ ಕಲ್ಮಶ, ಕೊಳೆ ತೊಳೆದು ಅಂತಿಮ ಸಂಸ್ಕಾರ. ಅಪರಕರ್ಮದ ಮೂಲಕ ಸಂಸ್ಕಾರ
ನಡೆಯುತ್ತಿದೆ.
ವೈದಿಕ ಚಿಂತಕ ಭಾನುಪ್ರಕಾಶ ಶರ್ಮ. ಸುಮಾರು 1 ಸಾವಿರ ಶ್ರೀಗಂಧ ಬಳಸಿ ಎಸ್ ಎಂ ಕೃಷ್ಣ ಅವರ ಅಂತಿಮ ಸಂಸ್ಕಾರ ನಡೆಯುತ್ತಿದೆ ಎಂದು ಭಾನುಪ್ರಕಾಶ ಶರ್ಮಾ ಹೇಳಿದ್ದಾರೆ.
ಎಸ್ ಎಂ ಕೃಷ್ಣ ಅಂತ್ಯಕ್ರಿಯೆನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸಚಿವರ ವಿಪಕ್ಷ ನಾಯಕರಗಳು ಸೇರಿದಂತೆ ರಾಜ್ಯದ ಅನೇಕ ಗಣ್ಯರು ಪಾಲ್ಗೊಂಡಿದ್ದಾರೆ.
PublicNext
11/12/2024 03:32 pm