ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ವಕ್ಫ್ ಹೆಸರಲ್ಲಿ ರೈತರ ಜಮೀನು ನುಂಗಲು ಹುನ್ನಾರ- ಒಗ್ಗಟ್ಟಿನ ಹೋರಾಟಕ್ಕೆ ಸಂಘಟನೆಗಳ ತಯಾರಿ

ಮಂಡ್ಯ: ವಕ್ಫ್ ಹೆಸರಲ್ಲಿ ರೈತರ ಜಮೀನುಗಳನ್ನು ನುಂಗಲು ಹವಣಿಸುತ್ತಿರುವ ಹುನ್ನಾರವನ್ನು ತಡೆಯಲು ಹೋರಾಟ ನಡೆಸುವ ಉದ್ದೇಶದಿಂದ ದಲಿತ ಸಂಘಟನೆಗಳು, ಹಿಂದೂ ಪರ ಸಂಘಟನೆಗಳು, ಕನ್ನಡ ಹೋರಾಟಗಾರರು ಹಾಗೂ ಕಿಸಾನ್ ಸಂಘ ಒಂದಾಗಿವೆ.

ಮಂಡ್ಯದಲ್ಲಿಂದು ಹೋರಾಟದ ರೂಪುರೇಷೆ ಸಿದ್ದಪಡಿಸಿದ ಸಂಘಟನೆಗಳು, ನಂತರ ನಗರದ ಪ್ರಮುಖ ಬೀದಿಗಳಲ್ಲಿ ಜನಸಾಮಾನ್ಯರಿಗೆ ಕರಪತ್ರ ಹಂಚುವ ಮೂಲಕ ಹೋರಾಟಕ್ಕೆ ನಾಂದಿ‌ ಹಾಡಿದ್ರು.

ಡಿಸೆಂಬರ್ 9ರಂದು ಬೆಳಿಗ್ಗೆ 11 ಗಂಟೆಗೆ 'ರೈತರ rally' ನಗರದ‌ ಸಿಲ್ವರ್ ಜ್ಯುಬಿಲಿ ಪಾರ್ಕ್ ನಿಂದ ಪ್ರಾರಂಭವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ, ಅಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು ಎಂದು ಬಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ತಿಳಿಸಿದ್ರು.

ರೈತ ಪರ ಪಕ್ಷಾತೀತ- ಜಾತ್ಯತೀತವಾಗಿ ಮತ್ತು ಸಂಘಟನೆಗಳು ಒಂದಾಗಿ ನಡೆಸುತ್ತಿರುವ ಹೋರಾಟಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕೆಂದು ಮನವಿ ಮಾಡಲಾಯಿತು. ಮಂಡ್ಯದ ಇತಿಹಾಸದಲ್ಲಿ ಕಾವೇರಿ ಹೋರಾಟ ಹೊರತು ಪಡಿಸಿದ್ರೆ ವಕ್ಫ್ ವಿರುದ್ದ ಹೋರಾಟಕ್ಕೆ ತಮ್ಮ ಒಮ್ಮತದ ಬೆಂಬಲ ನೀಡಿರುವುದು ನಿಜಕ್ಕೂ ಸ್ಮರಿಸಬೇಕಾದ ವಿಚಾರವಾಗಿದೆ ಅಂತ ಜಯ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ನಾರಾಯಣ್ ತಿಳಿಸಿದ್ದಾರೆ.

Edited By : Manjunath H D
PublicNext

PublicNext

06/12/2024 05:59 pm

Cinque Terre

29.34 K

Cinque Terre

0