ಮಂಡ್ಯ: ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿರುವ ಕುರಿತು ತನಿಖೆಗೆ ಸೂಚಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಗ್ರಾಪಂ ಪಿಡಿಒ ವಿನಯ್ ಕುಮಾರ್ ನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಬೂದನೂರು ಗ್ರಾಪಂನ ಆಡಳಿತ ಮಂಡಳಿ, ಪಿಡಿಒ ವಿನಯ್ ಕುಮಾರ್ ಕಳೆದ ೪ ವರ್ಷಗಳಿಂದ ಗ್ರಾಮಪಂಚಾಯಿತಿಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆಸಿದ್ದಾರೆ.
ಇವರ ವಿರುದ್ಧ ತನಿಖೆಗೆ ಸಮಿತಿ ರಚಿಸಿದರೂ, ತನಿಖೆಗೆ ಮುಂದಾಗದೆ ಜಿಪಂ ಸಿಇಒ ಅಮಿಷ, ಪ್ರಭಾವಕ್ಕೆ ಒಳಗಾಗಿ ಅನ್ಯಾಯವೆಸಗುತ್ತಿದ್ದಾರೆ. ಎಂದು ಆರೋಪಿಸಿ ಸ್ವಂತ ಮನೆ ನಮ್ಮಹಕ್ಕು ಹೋರಾಟ ಸಮಿತಿ ಸದಸ್ಯರು ಜಿಪಂ ಕಚೇರಿ ಮುಂದೆಅನಿರ್ಧಿಷ್ಠಾವಧಿ ಧರಣಿ ಹೋರಾಟ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಬುಧವಾರ ಜಿಪಂ ಸಿಇಒ ಅವರು ಹೋರಾಟ ಸಮಿತಿಯ ಮುಖಂಡ ಬಿ.ಕೆ.ಸತೀಶ್ ಹಾಗೂ ತಂಡದವರೊಂದಿಗೆ ಮಾತುಕತೆ ನಡೆಸಿ, ನೀವು ಸಲ್ಲಿಸಿರುವ 17 ವಿಷಯಗಳ ದೂರಿನಲ್ಲಿರುವ ಅಂಶಗಳ ಕುರಿತು ತನಿಖೆ ಮಾಡಲು ಈ ಕಚೇರಿಯ ಆದೇಶದಲ್ಲಿ ರಚಿಸಲಾಗಿರುವ ತನಿಖಾ ತಂಡದ ಅಧಿಕಾರಿಗಳಿಂದ ತುರ್ತಾಗಿ ವರದಿಯನ್ನು ಪಡೆದುಕೊಂಡು ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ತಮ್ಮ ಆದೇಶದಲ್ಲಿ ಬೂದನೂರು ಗ್ರಾ.ಪಂ ಪಿಡಿಓ ವೈ.ಎಸ್.ವಿನಯ್‌ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅರುಣ್ ಪ್ರಸಾದ್ ಪಬ್ಲಿಕ್ ನೆಕ್ಸ್ಟ್ , ಮಂಡ್ಯ
Kshetra Samachara
05/12/2024 11:33 am