ಕೆ.ಆರ್ ಪೇಟೆ: ಅಕ್ಟೋಬರ್ 13ರಿಂದ 16ರವರೆಗೆ ಮಹಾಕುಂಭಮೇಳ ನಡೆಯಲಿರುವ ಮಂಡ್ಯ ಜಿಲ್ಲೆಯ ಅಂಬಿಗರನಹಳ್ಳಿ-ಸಂಗಾಪುರದ ತ್ರಿವೇಣಿ ಸಂಗಮಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಂಭ ಸ್ನಾನ, ವೇದಿಕೆ ಕಾರ್ಯಕ್ರಮ ನಡೆಯಲಿರುವ ಸ್ಥಳದ ಪರಿಶೀಲನೆ ನಡೆಸಿ ಲಕ್ಷಾಂತರ ಭಕ್ತರು, ಸಾಧು ಸಂತರು ಆಗಮಿಸುವುದರಿಂದ ಅವರಿಗೆ ಊಟ, ಶೌಚಾಲಯ, ಪ್ರತ್ಯೇಕ ಸ್ನಾನದ ಘಟ್ಟದ ವ್ಯವಸ್ಥೆ, ಭದ್ರತೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕುಂಭಮೇಳ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ದಕ್ಷಿಣ ಕರ್ನಾಟಕದಲ್ಲಿ ನಡೆಯುತ್ತಿರುವ ಈ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆಕೊಟ್ಟರು.
PublicNext
12/10/2022 06:52 pm