ಮಂಡ್ಯ : ವಕ್ಫ್ ಹೆಸರಲ್ಲಿ ರೈತರ ಭೂಮಿಕಬಳಿಸಲುಹೊರಟಿರುವ ರಾಜ್ಯಸರ್ಕಾರದ ನೀತಿಯನ್ನ ಖಂಡಿಸಿ ಇಂದು ರೈತಸಂಘಟನೆ ಗಳು ಹಾಗೂ ಹಿಂದೂಪರ ಸಂಘಟನೆಗಳು ಶ್ರೀರಂಗಪಟ್ಟಣ ಬಂದ್ ಗೆ ಕರೆನೀಡಿದ್ದ ಬಂದ್ ಯಶಸ್ವಿಯಾಗಿ ನಡೆಯಿತು.
ಪಟ್ಟಣದಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ಬೆಂಬಲ ಸೂಚಿಸಿದರು.
ಹನ್ನೊಂದು ಗಂಟೆ ನಂತರ ಹಿಂದೂಪರ ಸಂಘಟನೆ ಹಾಗೂ ರೈತ ಸಂಘಟನೆಗಳು ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿರಾಜ್ಯಸರ್ಕಾರ ಹಾಗೂ ವಕ್ಫ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪಿತ್ರಾರ್ಜಿತ ಆಸ್ತಿಗೆ ಮಾರಕವಾಗಿರುವ ವಕ್ಫ್ ಕಾನೂನುನನ್ನಬಕೈಬಿಡುವಂತೆಸರ್ಕಾರಕ್ಕೆ ಆಗ್ರಹಿಸಿದರು.
PublicNext
21/01/2025 07:58 am