", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/378325-1738562333-1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ ಎಡದಂಡೆ ನಾಲೆಗೆ ನೀರು ಹರಿಸದ ಹಿನ್ನಲೆ ಅಧಿಕಾರಿಗಳ ವಿರುದ್ಧ ಮಾಜಿ ಸಚಿವ ನಾರಾಯಣಗೌಡ...Read more" } ", "keywords": ",Mandya,Politics", "url": "https://publicnext.com/node" }
ಮಂಡ್ಯ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ ಎಡದಂಡೆ ನಾಲೆಗೆ ನೀರು ಹರಿಸದ ಹಿನ್ನಲೆ ಅಧಿಕಾರಿಗಳ ವಿರುದ್ಧ ಮಾಜಿ ಸಚಿವ ನಾರಾಯಣಗೌಡ ಕೆಂಡಾಮಂಡಲವಾಗಿದ್ದಾರೆ.
ಫೋನ್ ಮೂಲಕವೇ ನೀರಾವರಿ ಅಧಿಕಾರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದು ನಾಲೆಗೆ ನೀರು ಬಿಡದಿದ್ದರೇ ಪ್ರತಿಭಟನೆ ಕೂರಬೇಕಾಗುತ್ತದೆ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಅದರ ಜೊತೆಗೆ ನಿಮ್ಮ ಕಚೇರಿಗಳಿಗೆ ಬೀಗ ಹಾಕುತ್ತೇನೆಂದು ಅವಾಜ್ ಹಾಕಿದ್ದಾರೆ. ರೈತರ ಪರ ಇದ್ದು ರೈತರ ಕಷ್ಟ ನೋಡಿಕೊಳ್ಳಬೇಕು. ಕಬ್ಬು, ಭತ್ತ ಸೇರಿ ಎಲ್ಲ ಬೆಳೆ ಒಣಗುತ್ತಿದೆ. ಆದರೂ ನಾಲೆಗೆ ನೀರು ಹರಿಸಿಲ್ಲ. ನೀವು ರೈತರ ಪರ ಇರಬೇಕೆ ಹೊರತು ಕಂಟ್ರಾಕ್ಟರ್ ಪರವಲ್ಲ. ನೀರು ಬಿಡು ಇಲ್ಲ ರಾಜೀನಾಮೆ ಕೊಡು ಅಂತ ಆಕ್ರೋಶ ಹೊರ ಹಾಕಿದ್ದಾರೆ.
ಮುಂದುವರಿಸಿ ದನಕರುಗಳಿಗೆ ನೀರು ಸಿಗುತ್ತಿಲ್ಲ, ರೈತರು ಮಣ್ಣು ತಿನ್ನಬೇಕಾ? ನಿಮಗೆ ನಾಚಿಕೆ ಆಗಲ್ವಾ ಎಂದು ಮಾಜಿ ಸಚಿವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
PublicNext
03/02/2025 11:28 am