", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/418299-1737957919-adikara.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ: ಕಾಂಗ್ರೆಸ್ ನಾಯಕರ ವಿರುದ್ಧ ಯುವ ಕಾಂಗ್ರೆಸ್ ಮುಖಂಡರೇ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗವೊಂದು ಮಂಡ್ಯದಲ್ಲಿ‌ ಜರುಗಿದೆ. ಮಂಡ್ಯದ ಕೆಆ...Read more" } ", "keywords": "Mandya News, Congress Workers Protest, Youth Wing Rebellion, Karnataka Politics, Indian National Congress, INC Leadership, Mandya District, Karnataka Government, Political Unrest, Congress Party Crisis ,Mandya,Politics,Government", "url": "https://publicnext.com/node" } ಮಂಡ್ಯ: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಆಕ್ರೋಶ - ನಾಯಕರ ವಿರುದ್ಧ ತಿರುಗಿ ಬಿದ್ದ ಯುವ ಪಡೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಆಕ್ರೋಶ - ನಾಯಕರ ವಿರುದ್ಧ ತಿರುಗಿ ಬಿದ್ದ ಯುವ ಪಡೆ

ಮಂಡ್ಯ: ಕಾಂಗ್ರೆಸ್ ನಾಯಕರ ವಿರುದ್ಧ ಯುವ ಕಾಂಗ್ರೆಸ್ ಮುಖಂಡರೇ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗವೊಂದು ಮಂಡ್ಯದಲ್ಲಿ‌ ಜರುಗಿದೆ.

ಮಂಡ್ಯದ ಕೆಆರ್ ಪೇಟೆ ಪ್ರವಾಸಿ ಮಂದಿರದಲ್ಲಿ ನಡೆದ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಹಿನ್ನೆಲೆ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಹೇಂದ್ರ, ಪ್ರವೀಣ್, ದೀಪು, ಅನಿಲ್ ಆಕ್ರೋಶ ವ್ಯಕ್ತಪಡಿಸಿದ್ದು, ನಾವು ಪಕ್ಷಕ್ಕಾಗಿ ಹಗಲು, ರಾತ್ರಿ ದುಡಿದಿದ್ದೇವೆ. ಯುವಕರನ್ನು ಸಂಘಟಿಸಲು ಹಗಲು, ರಾತ್ರಿ ಓಡಾಡಿದ್ದೀವೆ. ಆದರೆ ಸರ್ಕಾರದ ನಾಮಿನಿ ವಿಚಾರದಲ್ಲಿ ನಮ್ಮನ್ನ ಕಡೆಗಣಿಸಿದ್ದೀರಾ ಎಂದು ಆರೋಪಿಸಿದ ಯುವ ಮುಖಂಡರು, ಕೆಲ ನಾಯಕರ ಚೇಲಾಗಳಿಗೆ ಮಾತ್ರ ನಾಮಿನಿ ಅಧಿಕಾರ ಸಿಕ್ಕಿದೆ ಎಂದು ಗಂಭೀರ ಆರೋಪಿಸಿದ್ದಾರೆ.

ನಾವು ಪಕ್ಷ ಸಂಘಟನೆಮಾಡದೇ ನಿಮ್ಮ ಮನೆ ಬಾಗಲಿಗೆ ಬಂದು ಚಮಚಾ ಗಿರಿ ಮಾಡಬೇಕಾ? ಹಾಗಿದ್ರೆ ನಾಮಿನಿ ಕೊಡಿಸತ್ತೀರಾ? ಎಂದು ನಾಯಕರಿಗೆ ಖಡಕ್ ಪ್ರಶ್ನೆ ಮಾಡಿದ್ದಾರೆ.

ನಮ್ಮ ಅವಶ್ಯಕತೆ ಪಕ್ಷಕ್ಕೆ ಇಲ್ವಾ ಎಂದು ಪ್ರಶ್ನೆ ಮಾಡಿರುವ ಯುವ ಮುಖಂಡರ ಆಕ್ರೋಶಕ್ಕೆ ಕಾಂಗ್ರೆಸ್ ನಾಯಕರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶವನಾಥ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಕಿಕ್ಕೇರಿ ಸುರೇಶ್ ತಬ್ಬಿಬಾಗಿದ್ದಾರೆ.

Edited By : Ashok M
PublicNext

PublicNext

27/01/2025 11:35 am

Cinque Terre

27.69 K

Cinque Terre

0