", "articleSection": "Politics,Law and Order", "image": { "@type": "ImageObject", "url": "https://prod.cdn.publicnext.com/s3fs-public/378325-1738136971-7.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ: ಕಾರ್ಯಕ್ರಮವೊಂದಕ್ಕೆ ಭಾಷಣಕಾರರಾಗಿ ಬಂದಿದ್ದ ಪುನೀತ್ ಕೆರೆಹಳ್ಳಿಗೆ ಪೊಲೀಸರು ನಿರ್ಬಂಧ ವಿಧಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಕೆರ...Read more" } ", "keywords": "Mandya, Punith Kerehalli, Police Restrictions, Hindu Activists Protest, Karnataka News, Mandya Protests, Punith Kerehalli Program, Police Action Against Activists, Hindu Organizations React,Politics,Law-and-Order", "url": "https://publicnext.com/node" }
ಮಂಡ್ಯ: ಕಾರ್ಯಕ್ರಮವೊಂದಕ್ಕೆ ಭಾಷಣಕಾರರಾಗಿ ಬಂದಿದ್ದ ಪುನೀತ್ ಕೆರೆಹಳ್ಳಿಗೆ ಪೊಲೀಸರು ನಿರ್ಬಂಧ ವಿಧಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಕೆರಗೋಡು ಹನುಮಧ್ವಜ ತೆರವು ಪ್ರಕರಣಕ್ಕೆ ಒಂದು ವರ್ಷವಾದ ಹಿನ್ನೆಲೆ ಈ ದಿನವನ್ನ ಕರಾಳ ದಿನವಾಗಿ ಆಚರಿಸಲು ಮುಂದಾಗಿದ್ದ ಹಿಂದೂಪರ ಸಂಘಟನೆಗಳು ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಹಿಂದೂಪರ ಹೋರಾಟಗಾರ ಪುನೀತ್ ಕೆರಳ್ಳಿಯನ್ನು ಆಹ್ವಾನಿಸಿದ್ದರು.
ಸಂಜೆ ೭ ಗಂಟೆಗೆ ಕಾರ್ಯಕ್ರಮಕ್ಕೆ ಸುಮಾರು ೫ಗಂಟೆಗೆ ಆಗಮಿಸಿದ ಪುನೀತ್ ಕೆರೆಹಳ್ಳಿಯನ್ನು ಕೆರಗೊಡಿಗೆ ಪ್ರವೇಶಿಸದಂತೆ ಅಂಕಣ್ಣನ ದೊಡ್ಡಿಬಳಿ ಕೆರಗೋಡು ಪೊಲೀಸರು ತಡೆಯೊಡ್ಡಿದರು.
ಅಲ್ಲೇ ಇದ್ದ ಅವರ ಸ್ನೇಹಿತರ ಮನೆಗೆ ತೆರಳಿದ ಪುನೀತ್ ಕೆರೆಹಳ್ಳಿ ಅಲ್ಲೆ ಕೆಲಕಾಲ ವಿಶ್ರಾಂತಿ ಪಡೆದು ನಂತರ ಕಾರ್ಯಕ್ರಮಕ್ಕೆ ತೆರಳಲು ಮುಂದಾದರು. ಆಗ ಕಾರ್ಯಕ್ರಮಕ್ಕೆ ತೆರಳದಂತೆ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ತಡೆದರು.
ಪೋಲಿಸ್ ನಡೆಗೆ ವಿರೋಧ ವ್ಯಕ್ತಪಡಿಸಿದ ಪುನೀತ್ ಕೆರೆಹಳ್ಳಿ ಕಾರ್ಯಕ್ರಮ ಆಯೋಜಕರ ಅನುಮತಿ ಪಡೆದು ಅಲ್ಲಿಂದ ಹಿಂತಿರುಗಿ ಹೋದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿಂದೂ ಪರ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
PublicNext
29/01/2025 01:19 pm