ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ : ಪ್ರೇಮ ವಿವಾಹಕ್ಕೆ ಸಪೋರ್ಟ್‌ ಮಾಡದ್ದಕ್ಕೆ ಸ್ನೇಹಿತರ ಮೇಲೆ ಮಾರಣಾಂತಿಕ ಹಲ್ಲೆ

ಮಂಡ್ಯ : ಪ್ರೇಮ ವಿವಾಹಕ್ಕೆ ಸಹಕಾರ ನೀಡದ ಕಾರಣ ಸ್ನೆಹಿತರನ್ನೇ ಕಿಡ್ನ್ಯಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ಜರುಗಿದೆ.

ಮದ್ದೂರು ತಾಲೂಕು ಕೊಪ್ಪ ಸಮೀಪದ ಅಂಕನಹಳ್ಳಿ ಗ್ರಾಮದ ಬಸವನ ಜಾತ್ರೆಯಲ್ಲಿದ್ದ ಸ್ನೇಹಿತರನ್ನ ಅಡ್ಡಗಟ್ಟಿ ನಮ್ಮ ಸ್ನೇಹಿತನ ವಿವಾಹಕ್ಕೆ ಸಹಕಾರ ನೀಡದ ಹಿನ್ನೆಲೆ ಕಿಡ್ನ್ಯಾಪ್ ಮಾಡಿ ಮಾರ ಣಾಂತಿಕ ಹಲ್ಲೆ ನಡೆಸಿದ ಕಾರಣ ಓರ್ವನ ಸ್ಥಿತಿ ಚಿಂತಾಜನಕ ವಾಗಿದ್ದು‌, ಮತ್ತೊಬ್ಬನ ಎರಡು ಬೆರಳು ತುಂಡಾಗಿವೆ.

ಮಂಡ್ಯ ತಾಲೂಕು ಬಸರಾಳು ಹೊಬಳಿ ದೊಡ್ಡಗರುಡನಹಳ್ಳಿ‌ ಗ್ರಾಮದ ಅನ್ನದಾನಿ ಮಗ ಅಪ್ಪುರಾಜ್ ಎಂಬಾತ ಬಿಳಿದೇಗಲು ಗ್ರಾಮದ ಯುವತಿಯನ್ನ ಪ್ರೀತಿಸಿ ಓಡಿಹೋಗಿ ಮದುವೆಯಾಗಿದ್ದ, ಇದಕ್ಕೆ ಸಹಕಾರ ನೀಡಲಿಲ್ಲ ಅಂತ ಆರೋಪಿಸಿ ಕಿರಣ್ ಮತ್ತು ದರ್ಶನ್ ಎಂಬಾತರಿಗೆ ಅಪ್ಪು ಸ್ನೇಹಿತರು ಕ್ಯಾತೆ ತೆಗೆದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಹಲ್ಲೆಯಿಂದ ಬೈರೇಗೌಡನ ಮಗ ಕಿರಣ್ (22)ನ ಎರಡು ಬೆರಳು ತುಂಡಾಗಿದ್ರೆ, ಬಿ.ಹೊಸೂರು ಕಾಲೊನಿಯ ದರ್ಶನ್(23)ಸ್ಥಿತಿ ಚಿಂತಾಜನಕವಾಗಿದೆ.

ಶುಕ್ರವಾರ ತಡರಾತ್ರಿ ಇವರನ್ನ ಕೊಪ್ಪದ ಸಮೀಪದ ಅಂಕನಹಳ್ಳಿಯಿಂದ ಕಿಡ್ನ್ಯಾಪ್ ಮಾಡಿ ಯಶವಂತ, ದೃವ, ದಿಲೀಪ್, ನಿರಂಜನ್, ಆಕಾಶ್, ಅಪ್ಪುರಾಜ್, ದೀಕ್ಷಿತ್ ಎಂಬ ಆರುಮಂದಿ ಆರೋಪಿಗಳು ಕಿರಣ್ ದರ್ಶನ್ ಮೇಲೆ ಹಲ್ಲೆ ನಡೆಸಿ ಪ್ರಜ್ಞಾ ಹೀನರಾದಾಗ ಸತ್ತಿದ್ದಾರೆ ಅಂತ ತಿಳಿದು‌‌ ಬಿಟ್ಟು ಹೋಗಿದ್ದಾರೆ.

ಎಚ್ಚರಗೊಂಡ ಕಿರಣ್ ಸ್ನೇಹಿತ ದರ್ಶನ್‌ನನ್ನು ಎಬ್ಬಿಸಲು ಹೋದಾಗ ಅವನ ಸ್ಥಿತಿ ಗಂಭೀರವಾಗಿರುವುದನ್ನ ನೋಡಿ ತನ್ನ ಬಳಿಯಿದ್ದ ಪೋನ್‌ನಿಂದ ಮನೆಯವರಿಗೆ ಕರೆ ಮಾಡಿ ಕರೆಸಿ ಕೊಂಡಿದ್ದಾನೆ. ಕೂಡಲೇ ಇಬ್ಬರನ್ನ ಅಸ್ಪತ್ರೆಗೆ ದಾಖಲಿಸಿದ್ದು ಕಿರಣ್‌ನ ಎರಡು ಬೆರಳು ಕಟ್ ಆಗಿದ್ದು ಮಂಡ್ಯ ಮಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದರ್ಶನ್‌ನನ್ನು ಮೈಸೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದು, ಅದೃಷ್ಟವಶಾತ್ ಸಾವಿನ ಅಂಚಿನಿಂದ ಹೊರಗೆ ಬಂದಿದ್ದಾನೆ ಎನ್ನಲಾಗಿದೆ. ಹಲ್ಲೆಗೂ ಮುನ್ನ ಜಾತ್ರೆಯಲ್ಲಿ ಇವರ ಜೊತೆ ಸ್ಟೆಪ್ ಹಾಕಿದ್ರು ಎನ್ನಲಾಗಿದೆ.

ಕೆರಗೊಡು ಪೋಲಿಸರು ದೂರು ದಾಖಲಿಸಿಕೊಂಡು ಆರೋಪಿಗಳ ಹೆಡೆಮುರಿ‌ ಕಟ್ಟಲು ಮುಂದಾಗಿದ್ದಾರೆ.

Edited By : Abhishek Kamoji
PublicNext

PublicNext

19/01/2025 05:40 pm

Cinque Terre

27.13 K

Cinque Terre

0

ಸಂಬಂಧಿತ ಸುದ್ದಿ