ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಪ್ರಿಲ್ 9 ರಂದು ಇಮ್ರಾನ್ ಖಾನ್ ಭವಿಷ್ಯ ನಿರ್ಧಾರ : ಪಾಕ್ ಸುಪ್ರೀಂ ಕೋರ್ಟ್

ಇಸ್ಲಾಮಾಬಾದ್: ಏ.9 ರಂದು ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಪಾಕ್ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಮೂಲಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಮತ್ತೆ ಹಿನ್ನಡೆಯಾಗಿದೆ. ಡೆಪ್ಯೂಟಿ ಸ್ಪೀಕರ್ ಅವರು ಅವಿಶ್ವಾಸ ಗೊತ್ತುವಳಿ ನಿರ್ಣಯದ ಪ್ರಸ್ತಾಪವನ್ನ ವಜಾ ಮಾಡಿದ್ದು ಅಸಂವಿಧಾನಿಕ ಎಂದು ಪಾಕಿಸ್ತಾನ್ ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಏಪ್ರಿಲ್ 3 ರಂದು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿಯನ್ನ ಸಂಸತ್ ನಲ್ಲಿ ಮಂಡಿಸಿದ್ದರು. ಆದರೆ ಅಲ್ಲಿನ ಡೆಪ್ಯೂಟಿ ಸ್ಪೀಕರ್ ಅದನ್ನ ವಜಾ ಮಾಡಿ ಆದೇಶ ನೀಡಿದ್ದರು.

ಡೆಪ್ಯೂಟಿ ಸ್ಪೀಕರ್ ನಿರ್ಧಾರವನ್ನ ಪ್ರಶ್ನಿಸಿ, ಇಮ್ರಾನ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು.

ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಪಾಕ್ ಸುಪ್ರೀಂ ಕೋರ್ಟ್ನ ಸ್ಪೀಕರ್ ನೀಡಿರುವ ಆದೇಶ ಸಂವಿಧಾನ ಬಾಹೀರ ಎಂದಿದೆ. ಅಲ್ಲದೇ ಏಪ್ರಿಲ್ 9 ರಂದು ಮತ್ತೆ ವಿರೋಧ ಪಕ್ಷಗಳಿಗೆ ಅವಿಶ್ವಾಸ ನಿರ್ಣಯ ಗೊತ್ತುವಳಿಯನ್ನ ಮಂಡಿಸಲು ಸೂಚನೆ ನೀಡಿದೆ.

Edited By : Nirmala Aralikatti
PublicNext

PublicNext

07/04/2022 10:42 pm

Cinque Terre

61.04 K

Cinque Terre

2

ಸಂಬಂಧಿತ ಸುದ್ದಿ