ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾದ ಆಗ್ರಮಣದ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಪರಮಾಣು ನಿರೋಧಕ ಪಡೆಗಳು ಅಲರ್ಟ್ ಆಗುವಂತೆ ಆದೇಶಿಸಿದ್ದು, ಜಾಗತಿಕ ಮಟ್ಟದಲ್ಲಿ ತಲ್ಲಣ ಮಾಡಿಸಿದೆ.
ರಷ್ಯಾದ ಉನ್ನತ ಅಧಿಕಾರಿಗಳೊಂದಿಗಿನ ಭಾನುವಾರ ನಡೆಸಿದ ಸಭೆಯಲ್ಲಿ ಮಾತನಾಡಿದ ವ್ಲಾಡಿಮಿರ್ ಪುಟಿನ್ ಅವರು, ಪ್ರಮುಖ ನ್ಯಾಟೋ ಶಕ್ತಿಗಳು ರಷ್ಯಾ ವಿರುದ್ಧ ಆಕ್ರಮಣಕಾರಿ ಹೇಳಿಕೆ ನೀಡಿವೆ. ಇಷ್ಟೇ ಅಲ್ಲದೆ, ರಷ್ಯಾದ ವಿರುದ್ಧ ಕಠಿಣ ಆರ್ಥಿಕ ನಿರ್ಬಂಧ ವಿಧಿಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಪರಮಾಣು ನಿರೋಧಕ ಪಡೆಯನ್ನು "ಯುದ್ಧ ಕರ್ತವ್ಯದ ವಿಶೇಷ ರೆಜಿಮ್"ನಲ್ಲಿ ಇರಿಸಲು ಪುಟಿನ್ ಆದೇಶಿಸಿದ್ದಾರೆ. ರಷ್ಯಾದ ಈ ನಡೆಯು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.
PublicNext
27/02/2022 08:17 pm