ಹುಬ್ಬಳ್ಳಿ: ಫ್ಲೀಟ್ ಗಾರ್ಡ್ ಫಿಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ನ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಯಡಿಯಲ್ಲಿ ಮಹೀಂದ್ರಾ ಸುಪ್ರೊ ಝೆಡ್ ಎಕ್ಸ್ ಆಂಬ್ಯುಲೆನ್ಸ್ ನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮೂಲಕ ಹುಬ್ಬಳ್ಳಿ ತಾಲೂಕು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.
ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ಆಂಬ್ಯುಲೆನ್ಸ್ ಗೆ ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.
8 ಲಕ್ಷದ ಅಂಬ್ಯುಲೆನ್ಸ್ ನ್ನು ಸಾರ್ವಜನಿಕ ಸೇವೆಗೆ ನೀಡಲಾಗುತ್ತಿದೆ. ಸಮಾಜದ ಆರೋಗ್ಯಕ್ಕೆ ಉಪಯುಕ್ತ ರೀತಿಯಲ್ಲಿ ಆಂಬ್ಯುಲೆನ್ಸ್ ಬಳಕೆಯಾಗಬೇಕು. ಕಂಪನಿಯ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಆಂಬ್ಯುಲೆನ್ಸ್ ನೀಡುತ್ತಿರುವುದು ಸಂತಸ ತಂದಿದೆ ಎಂದು ಫ್ಲೀಟ್ ಗಾರ್ಡ್ ಫಿಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ನ ಮ್ಯಾನೇಜರ್ ಪ್ರಕಾಶ್ ಮಾಯಾಚಾರಿ ಮಾಹಿತಿ ನೀಡಿದರು.
PublicNext
30/01/2022 03:06 pm