ನವದೆಹಲಿ: ದೆಹಲಿಯಲ್ಲಿ ನಂದಿನಿ ಬ್ರ್ಯಾಂಡ್ ತುಳಿಯಲು ಎದುರಾಳಿಗಳು ಸಂಚು ರೂಪಿಸಿದ್ದ ಹಿನ್ನಲೆ ಎದುರಾಳಿಗಳಿಗೆ ಟಕ್ಕರ್ ಕೊಡಲು ನಂದಿನಿ ಮುಂದಾಗಿದೆ.
ಆನ್‌ಲೈನ್ ಮೂಲಕ ಮನೆ ಮನೆಗೆ ನಂದಿನಿ ತಲುಪಿಸಲು ಕೆಎಂಎಫ್ ಮುಂದಾಗಿದ್ದು, ಡೀಲರ್‌ಗಳ ಕೈ ತಪ್ಪಿಸಿ ಗ್ರಾಹಕರಿಗೆ ನಂದಿನಿ ತಲುಪಿಸುವ ಕಾರ್ಯ ನಡೆಯುತ್ತಿದೆ. ಹಾಗಾಗಿ ಆನ್ ಲೈನ್‌ನಲ್ಲಿ ನಂದಿನಿ ಮಾರಾಟ ಮಾಡಲು ನಿರ್ಧರಿಸಿದ್ದು ಬ್ಲಿಂಕಿಟ್ ಫ್ಲ್ಯಾಟ್ ಫಾರಂನಲ್ಲಿ ನಂದಿನಿ ಸೇಲ್ ಮಾಡಲು ತಯಾರಿ ನಡೀತಾ ಇದ್ಯಂತೆ. ಇದರಿಂದ ಡೀಲರ್ ಗಳ ಕುತಂತ್ರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತೆ.
PublicNext
09/12/2024 11:02 am