ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ದಿನಾಂಕ ಫಿಕ್ಸ್ ಆಗಿದೆ. ಅಷ್ಟಕ್ಕೂ ನಟ ದರ್ಶನ್ ಆರೋಗ್ಯದಲ್ಲಿ ಏನಾಗ್ತಿದೆ? ಡಾಕ್ಟರ್ ವರದಿ ಏನಿದೆ? ಎಂಬ ಮಾಹಿತಿ ಇಲ್ಲಿದೆ ನೋಡಿ.
ದರ್ಶನ್ ಮೆಡಿಕಲ್ ರಿಪೋರ್ಟ್ ಪಬ್ಲಿಕ್ ನೆಕ್ಸ್ಟ್‌ಗೆ ಲಭ್ಯವಾಗಿದೆ. ನಟ ದಚ್ಚು ಲುಂಬಾರ್ ಸ್ಪಾಂಡಿಲೋಸಿಸ್‌ನಿಂದ ಬಳಲುತ್ತಿದ್ದಾರೆ. ಅವರ ಸರ್ಜರಿ ಬಗ್ಗೆ ಬಿಜಿಎಸ್ ಆಸ್ಪತ್ರೆಯ ಸಿನಿಯರ್ ಸರ್ಜನ್ ಡಾ ನವೀನ್ ಎಂಎ ಮಾಹಿತಿ ಬಿಡುಗಡೆ ಮಾಡಿದೆ. ಡಿಸೆಂಬರ್ 11ರಂದು ದರ್ಶನ್ ಸರ್ಜರಿ ನಡೆಯಲಿದೆ.
ಬೆನ್ನುನೋವಿಗಾಗಿ ದರ್ಶನ್‌ಗೆ ಸ್ಟಿರಾಯ್ಡ್ ಇಂಜಕ್ಷನ್ ನೀಡಲಾಗಿದೆ. ಅಷ್ಟೇ ಅಲ್ಲದೆ ಅವರು ರೆಗ್ಯುಲರ್ ಫಿಸಿಯೋಥೆರಪಿಗೆ ಒಳಗಾಗುತ್ತಿದ್ದಾರೆ. ಬುಧವಾರ ದರ್ಶನ್‌ಗೆ ನೋವು ಕಡಿಮೆ ಮಾಡಲು ಲುಂಬರ್ ಡಿಕಂಪ್ರೆಶನ್ ಫ್ಯೂಶನ್ ಸರ್ಜರಿ ನಡೆಯಲಿದೆ ಎಂದು ಡಾ ನವೀನ್ ಎಂಎ ತಿಳಿಸಿದ್ದಾರೆ.
PublicNext
09/12/2024 08:42 pm