ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿಯಲ್ಲಿ ಪುರುಷರ ಬಯಲು ಕುಸ್ತಿ ಪಂದ್ಯಾವಳಿ !

ಅಣ್ಣಿಗೇರಿ: ಪಟ್ಟಣದ ಹೊರಕೇರಿ ಓಣಿಯ ಉಳವಿ ಚನ್ನಬಸವೇಶ್ವರ ಸೇವಾ ಸಮಿತಿ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಬಯಲು ಕುಸ್ತಿ ಪಂದ್ಯಾವಳಿಗಳಿಗೆ ಅಣ್ಣಿಗೇರಿ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಹಾಗೂ ಜನಾಬ್ ಸೈಯದ್ ದಾದಾಪೀರ್ ಸಜ್ಜಾದ ಹುಸೇನ್ ಖಾದ್ರಿ ಅವರು ಚಾಲನೆ ನೀಡಿದರು.

ಇನ್ನೂ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಸ್ಥಳೀಯರು ಸೇರಿದಂತೆ ಮಹಾರಾಷ್ಟ್ರದಿಂದ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಕುಸ್ತಿಪಟುಗಳು ಬಂದು ಭಾಗವಹಿಸಿದ್ದು ವಿಶೇಷವಾಗಿತ್ತು.

ಎರಡು ದಿನಗಳ ಕಾಲ ನಡೆದ ಕುಸ್ತಿ ಪಂದ್ಯಾವಳಿಗಳನ್ನು ನೋಡಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಸಾಕಷ್ಟು ಜನರು ಆಗಮಿಸಿದ್ದರು. ಪ್ರಥಮ ಬಹುಮಾನವನ್ನು ಸಂಜು ತಳಗಿನಕೊಪ್ಪ,ದ್ವಿತೀಯ ಬಹುಮಾನ ಮೀರಸಾಬ ಉಗರಗೋಳ, ತೃತೀಯ ಬಹುಮಾನ ಫಕೀರಪ್ಪ ಕರಡಿಕೊಪ್ಪ ಅವರು ತಮ್ಮದಾಗಿಸಿಕೊಂಡರು.

ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ

Edited By : Nagesh Gaonkar
Kshetra Samachara

Kshetra Samachara

19/05/2022 10:46 am

Cinque Terre

25.59 K

Cinque Terre

0

ಸಂಬಂಧಿತ ಸುದ್ದಿ