ಹುಬ್ಬಳ್ಳಿ: ಬ್ಲೂಮರ್ಸ್ ಗ್ರೂಪ್ ವತಿಯಿಂದ ಸತತ 13 ವರ್ಷಗಳಿಂದ ರಾಜಸ್ಥಾನ ಪ್ರೀಮಿಯರ್ ಲೀಗ್ (ಆರ್‌ಪಿಎಲ್) ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಾ ಬಂದಿದೆ. ಪಾಯಿಂಟ್ಸ್ ಮೂಲಕ ಪ್ಲೇಯರ್ಸ್‌ಗಳನ್ನು ಬಿಡ್ಡಿಂಗ್ ಮಾಡಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆರ್‌ಪಿಎಲ್ ತಂಡ ನಿನ್ನೆ ಸಾಯಂಕಾಲ ಟ್ರೋಪಿ ಮತ್ತು ಟೀ ಶರ್ಟ್ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶಾಸಕ ಮಹೇಶ್ ಟೆಂಗಿನಕಾಯಿ, ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಕೂಡ ಭಾಗಿ ಆಗಿ ಲಾಂಚ್ ಮಾಡಿದರು.
ಎಸ್... ಈ "ಆರ್‌ಪಿಎಲ್" ತನ್ನದೇ ಆದ ಛಾಪು ಮೂಡಿಸಿದೆ. 12 ಟೀಮ್‌ಗಳ ನಡುವೆ ರೋಚಕ ಕ್ರಿಕೆಟ್ ಫೈಟ್ ನಡೆಯುತ್ತವೆ. 156 ಪ್ಲೇಯರ್ಸ್ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಲಿದ್ದಾರೆ. RPL ಇದೇ ಡಿಸೆಂಬರ್ 15ರಿಂದ 18ರ ವರೆಗೆ ಮೂರು ದಿನಗಳ ಕಾಲ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆಯಲಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಟ್ರೋಪಿ ಲಾಂಚ್ ಮಾಡಿದರು. ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಟೀ ಶರ್ಟ್ ಅನಾವರಣ ಗೊಳಿಸಿದರು.
ಇನ್ನು, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿದ್ದರು. ಕಮಿಷನರ್ ಅವರ ಒಂದು ಮಹತ್ತರ ಕಾರ್ಯವನ್ನು ಮೆಚ್ಚಿ ಇಡೀ ರಾಜಸ್ಥಾನ ಸಮುದಾಯದವರು ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡು ಅವರ ಫೋಟೊ ಫ್ರೇಮ್ ಮಾಡಿಸಿ ಕೊಡುಗೆಯಾಗಿ ನೀಡಿದರು. ಅಷ್ಟೇ ಅಲ್ದೆ, ಹುಬ್ಬಳ್ಳಿ- ಧಾರವಾಡದಲ್ಲಿ ನಿಮ್ಮ ಕಾರ್ಯ ಇನ್ನೂ ಹೆಚ್ಚು ಇರಲಿ ಎಂದು ಹಾರೈಸಿದರು.
ಈ RPL ಕ್ರಿಕೆಟ್ ಪಂದ್ಯಾವಳಿಯ ಮೈನ್ ಸ್ಪಾನ್ಸರ್ಡ್ GM switch to better world ಇಡೀ ಆರ್‌ಪಿಎಲ್ ಟೂರ್ನಮೆಂಟ್‌ಗೆ ಬೆನ್ನೆಲುಬಾಗಿ ನಿಂತಿದ್ದು, ಸುರೇಶ ಜೈನ್ (ಲಕ್ಕಿ), ಕಮಿಟಿ ಸದಸ್ಯರಾದ ಪ್ರಕಾಶ ಕಟಾರಿಯಾ, ವಿಕ್ರಮ್ ಪೂಮಾನಿ, ಮೊನೆಕ್ಸಾ ರಾಜ ಪುರೋಹಿತ, ಮನೀಷ್ ಕೊಠಾರಿ, ಹರೀಶ್ ರಾಜಪುರೋಹಿತ, ದಿನೇಶ್ ರಾಠೋಡ ಭಾಗಿಯಾಗಿದ್ದು, ಈ ಟೂರ್ನಮೆಂಟ್ ಸಕ್ಸಸ್ ಮಾಡೋದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಮಾಡಿದ್ದಾರೆ. ಇನ್ನು, RPL ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ All The Best...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/12/2024 06:05 pm