ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಎಪಿಎಲ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಯಶ್ ಕಲಾಲ್ ತಂಡ

ಅಳ್ನಾವರ: ಯಶ್ ಕಲಾಲ್ ಒಡೆತನದ ಆದರ್ಶ ಬಿಗ್ ಡ್ಯಾಡಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕಳೆದ ಎಂಟು ದಿನಗಳಿಂದ ನಡೆಯುತ್ತಿದ್ದ ನಾಗರಾಜ ಛಬ್ಬಿ ಟ್ರೋಫಿ ಅಳ್ನಾವರ ಪ್ರೀಮಿಯರ್ ಲೀಗ್ ನಲ್ಲಿ ಎದುರಾಳಿ ಖಾನ್ ಕ್ರಿಕೆಟ್ ಕ್ಲಬ್ ತಂಡವನ್ನು ಮಣಿಸುವುದರ ಮೂಲಕ ಆದರ್ಶ ಬಿಗ್ ಡ್ಯಾಡಿ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಉತ್ತಮ ಪ್ರದರ್ಶನದ ಜೊತೆಗೆ ತಂಡವನ್ನು ಫೈನಲ್ ಹಂತದವರೆಗೂ ಕೊಂಡೊಯ್ದ ಯಶ್ ಕಲಾಲ್ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆಡಿದ ಎಂಟು ಪಂದ್ಯಗಳನ್ನು ಗೆದ್ದು ಚಾಂಪಿಯನ್ ಪಟ್ಟದ ಜತೆಗೆ ಆದರ್ಶ ಬಿಗ್ ಡ್ಯಾಡಿ ತಂಡ 55,555 ರೂ ಮತ್ತು ಟ್ರೋಪಿಯನ್ನು ಪಡೆದು ವಿಜಯದ ಮಾಲೆ ಧರಿಸಿ ಆಟದ ಮೈದಾನದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿತು.

ಪ್ರಶಸ್ತಿಗೆ ಭಾಜನವಾದ ಎ.ಬಿ.ಡಿ ತಂಡಕ್ಕೆ ಕಡಬಗಟ್ಟಿ ಗ್ರಾ.ಪಂ ಮಾಜಿ ಅಧ್ಯಕ್ಷ ದಾಸಗೀರಸಾಬ ಹುಣಸಿಕಟ್ಟಿ,ಪ,ಪಂ ಸದಸ್ಯ ರಾಜು ಯಲಕಪಾಟಿ, ತಮೀಮ್ ತೆರಗಾಂವ ಹಾಗೂ ಉಪಸ್ಥಿತರು ಟ್ರೋಫಿ ನೀಡಿ ಪ್ರಶಸ್ತಿ ವಿತರಿಸಿದರು.

Edited By : Nagaraj Tulugeri
Kshetra Samachara

Kshetra Samachara

13/03/2022 08:10 pm

Cinque Terre

46.54 K

Cinque Terre

0

ಸಂಬಂಧಿತ ಸುದ್ದಿ