ಹುಬ್ಬಳ್ಳಿ: ಉಣಕಲ್ ಪ್ರೀಮಿಯರ್ ಲೀಗ್ (ಯುಪಿಎಲ್)ನ 2ನೇ ಆವೃತ್ತಿಯ ಉದ್ಘಾಟನೆ ದಿನವಾದ ಇಂದು ನಡೆದ ಮೂರು ಪಂದ್ಯಗಳಲ್ಲಿ ಬ್ಯಾಟರ್‌ಗಳು ಅಬ್ಬರಿಸಿದ್ದಾರೆ. ಈ ಮಧ್ಯೆ ಬೌಲರ್ ಒಬ್ಬರು 3 ಓವರ್ ಬೌಲಿಂಗ್ ಮಾಡಿ ಕೇವಲ 7 ರನ್ ನೀಡಿ ಪ್ರಮುಖ 7 ವಿಕೆಟ್ ಕಿತ್ತು ಮಿಂಚಿದ್ದಾರೆ.
ಹುಬ್ಬಳ್ಳಿಯ ಆರ್.ಕೆ ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ಯುಪಿಎಲ್-2 ಟೂರ್ನಿಯ ಭಾಗವಾಗಿ ಇಂದು ನಗರದ ಸಪ್ತಗಿರಿ ಲೇಔಟ್‌ನ ಜೆಕೆ ಸ್ಕೂಲ್ ಸಮೀಪದಲ್ಲಿರುವ ಬಿಜಿ ಗ್ರೌಂಡ್‌ನಲ್ಲಿ ಪಂದ್ಯಗಳು ನಡೆದವು. ಇಂದಿನ ಮೂರು ಪಂದ್ಯಗಳಲ್ಲಿ ಆರ್‌ಸಿ ಸೂಪರ್ ಸ್ಟಾರ್ಸ್ ತಂಡದ ಸಂಗಮೇಶ್ ಎಸ್.ಐ ತಮ್ಮ ಬೌಲಿಂಗ್ ದಾಳಿ ಮೂಲಕ ಕ್ರಿಕೆಟ್ ಪ್ರಿಯರ ಗಮನ ಸೆಳೆದರು.
ಮೊದಲ ಪಂದ್ಯ:
ಯುಪಿಎಲ್-2 ಟೂರ್ನಿಯ ಮೊದಲ ಪಂದ್ಯದಲ್ಲಿ ಪಿಎಸ್ ರಾಯಲ್ ಚಾಲೆಂಜರ್ಸ್ ವಿರುದ್ಧ ಆರ್‌ಸಿ ಸೂಪರ್ ಸ್ಟಾರ್ಸ್ ತಂಡವು 3 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಿಎಸ್ ರಾಯಲ್ ಚಾಲೆಂಜರ್ಸ್ ನಿಗದಿತ 10 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಆರ್‌ಸಿ ಸೂಪರ್ ಸ್ಟಾರ್ಸ್ ತಂಡವು 9.2 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿ ಗೆಲವಿನ ನಗೆ ಬೀರಿತು. ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿರ ಸಂಗಮೇಶ್ ಎಸ್.ಐ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಎರಡನೇ ಪಂದ್ಯ:
ಯುಪಿಎಲ್-2 ಟೂರ್ನಿಯ ಎರಡನೇ ಪಂದ್ಯದಲ್ಲಿ ಚವಾಣ್ ವಾರಿಯರ್ಸ್ ವಿರುದ್ಧ ರಾಯಲ್ ಟೈಗರ್ಸ್ ತಂಡವು 10 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಚವಾಣ್ ವಾರಿಯರ್ಸ್ ನಿಗದಿತ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತ್ತು. ಬಳಿಕ 91 ರನ್‌ಗಳ ಗುರಿ ಬೆನ್ನತ್ತಿದ ರಾಯಲ್ ಟೈಗರ್ಸ್ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 93 ರನ್ ಬಾರಿಸಿ ಗೆದ್ದು ಬೀಗಿತು. ಈ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ (58 ರನ್, 23 ಎಸೆತ, 6 ಬೌಂಡರಿ, 5 ಸಿಕ್ಸ್) ಸಿಡಿಸಿದ ಉಮರ್ ಅಮ್ಮು ಪಂದ್ಯ ಶ್ರೇಷ್ಠಕ್ಕೆ ಪಾತ್ರರಾದರು.
ಮೂರನೇ ಪಂದ್ಯ:
ಯುಪಿಎಲ್-2 ಟೂರ್ನಿಯ ಮೂರನೇ ಪಂದ್ಯದಲ್ಲಿ ಲಖನ್ ಡ್ರಾಗನ್ಸ್ ವಿರುದ್ಧ ಬಾಲಾಜಿ ಬ್ಲಾಸ್ಟರ್ಸ್ ತಂಡವು 2 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಬಾಲಾಜಿ ಬ್ಲಾಸ್ಟರ್ಸ್ ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 106 ರನ್ ದಾಖಲಿಸಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಲಖನ್ ಡ್ರಾಗನ್ಸ್ 7 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಾಲಾಜಿ ಬ್ಲಾಸ್ಟರ್ಸ್ ತಂಡದ ಬ್ಯಾಟರ್ ಚಂದ್ರು (38 ರನ್, 24 ಎಸೆತ) ಪಂದ್ಯ ಶ್ರೇಷ್ಠ ಪಡೆದುಕೊಂಡರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/02/2022 10:00 pm